HEALTH TIPS

ಕಂತೆ ಕಂತೆ ನೋಟಿನ ಮೇಲೆ ಮಲಗಿದ್ದ ಅಸ್ಸಾಂ ನಾಯಕ, ಫೋಟೋ ವೈರಲ್

            ನವದೆಹಲಿ: ಅಸ್ಸಾಂನ ಲೋಕಸಭೆ ಚುನಾವಣೆಗೆ ಮುನ್ನ ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಲಿಬರಲ್ (UPPL) ಸದಸ್ಯರೊಬ್ಬರು ನೋಟು ಹಿಡಿದು ಮಲಗಿರುವ ಫೋಟೋವನ್ನು ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.

               ಯುಪಿಪಿಎಲ್‌ನ ವಿಲೇಜ್ ಕೌನ್ಸಿಲ್ ಡೆವಲಪ್‌ಮೆಂಟ್ ಕಮಿಟಿ (ವಿಸಿಡಿಸಿ) ಸದಸ್ಯ ಎಂದು ಗುರುತಿಸಲ್ಪಟ್ಟಿರುವ ಬೆಂಜಮಿನ್ ಬಾಸುಮತರಿ ಸಾಂಪ್ರದಾಯಿಕ ಟವೆಲ್ ಅನ್ನು ಮಾತ್ರ ಧರಿಸಿ, 500 ರೂ ನೋಟುಗಳ ಹಾಸಿಗೆಯ ಮೇಲೆ ಮಲಗಿರುವುದನ್ನು ಚಿತ್ರದಲ್ಲಿ ಕಾಣಬಹುದು.

             Fact Check ಪ್ರಕಾರ, ಈ ಫೋಟೋ ಹಳೆಯದ್ದಾಗಿದ್ದು ಚುನಾವಣಾ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಹಳೆಯ ಫೋಟೋವನ್ನು ವೈರಲ್ ಮಾಡಲಾಗಿದೆ ಎಂದು ಬಸುಮತರಿಗೆ ಆಪ್ತ ಮೂಲಗಳು ತಿಳಿಸಿವೆ.

                 ಯುಪಿಪಿಎಲ್ ಈ ಘಟನೆಯಿಂದ ದೂರ ಸರಿದಿದೆ. ವಿಸಿಡಿಸಿ ಹುದ್ದೆಯಿಂದ ಬಾಸುಮತಿಯನ್ನು ಅಮಾನತುಗೊಳಿಸಿ ತೆಗೆದುಹಾಕಿರುವುದನ್ನು ಖಚಿತಪಡಿಸಿದೆ. ಹರಿಸಿಂಗ ಬ್ಲಾಕ್ ಕಮಿಟಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದು, ಜನವರಿ 10ರಂದು ಬಸುಮತಿಯನ್ನು ಅಮಾನತುಗೊಳಿಸಲಾಗಿದೆ ಎಂದು ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೋರೊ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries