HEALTH TIPS

ಊಟ ಮಾಡಿದ ತಕ್ಷಣ ಸ್ನಾನ ಮಾಡಬಾರದು, ಮಾಡಿದರೆ ಏನಾಗುತ್ತೆ ಗೊತ್ತಾ?

 ಊಟ ಮಾಡಿದ ತಕ್ಷಣ ಸ್ನಾನಕ್ಕೆ ಹೋದರೆ ಮನೆಯಲ್ಲಿ ಹಿರಿಯರು ಬೈಯ್ಯುತ್ತಾರೆ, ತಿಂದ ತಕ್ಷನ ಸ್ನಾನಕ್ಕೆ ಹೋಗ್ತೀಯಲ್ಲಾ ನಿಂಗೆ ಅಷ್ಟೂ ಗೊತ್ತಾಗಲ್ವಾ, ಅದು ಒಳ್ಳೆಯದಲ್ಲ ಅಂತ ಗೊತ್ತಿಲ್ವಾ? ಎಂದು ಗದರುತ್ತಾರೆ,

ಆದರೆ ಇದು ಮೂಢನಂಬಿಕೆಯಲ್ಲ, ಸ್ನಾನ ಮಾಡಿದ ನಂತರ ಏಕೆ ಸ್ನಾನ ಮಾಡಬಾರದು ಎಂಬುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ತಿಂದ ತಕ್ಷಣ ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಆಗುವ ತೊಂದರೆಗಳೇನು ಎಂದ ನೋಡೋಣ ಬನ್ನಿ:

ತಿಂದ ತಕ್ಷಣ ಸ್ನಾನ ಮಾಡುವುದು ಒಳ್ಳೆಯದಲ್ಲ ಏಕೆ?

ಆಯುರ್ವೇದದ ಪ್ರಕಾರ ನಮ್ಮ ದೇಹದ ಪ್ರತಿಯೊಂದು ಚಟುವಟಿಕೆಗೆ ಇಂಥದ್ದೇ ಸಮಯ ಅಂತಿದೆ. ನಾವು ಆಹಾರ ಸೇವಿಸಿದ ತಕ್ಷಣ ನಮ್ಮ ದೇಹದ ಅಗ್ನಿಅಂಶ ಜೀರ್ಣಕ್ರಿಯೆಯ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಆದರೆ ತಿಂದ ತಕ್ಷಣ ಸ್ನಾನ ಮಾಡಿದರೆ ದೇಹ ತಂಪಾಗುವುದು, ಜೀರ್ಣಕ್ರಿಯೆಗೆ ತೊಂದರೆಯಾಗುವುದು.

ದೇಹ ತಂಪಾದಾಗ ದೇಹ ಜೀರ್ಣಕ್ರಿಯೆಗೆ ಅವಶ್ಯಕವಾದ ಉಷ್ಣಾಂಶ ಹೆಚ್ಚಿಸಿಕೊಳ್ಳುವುದು ಕಷ್ಟೊಡುವುದು, ಇದರಿಂದ ಅಜೀರ್ಣ, ಅಸಿಡಿಟಿ ಎಂಬ ಸಮಸ್ಯೆ ಉಂಟಾಗುವುದು. ಇನ್ನು ನಾವು ತಿಂದ ಆಹಾರದಲ್ಲಿ ಪ್ರೊಟೀನ್‌, ನಾರಿನಂಶ, ಕೊಬ್ಬಿನಂಶ ಎಲ್ಲವೂ ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಸರಿಯಾಗಿಯಾಗದೆ ಹೊಟ್ಟೆ ಉಬ್ಬುವುದು, ಮೈ ತೂಕ ಹೆಚ್ಚಾಗುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.

ರಕ್ತನಾಳಗಳಿಗೆ ತೊಂದರೆಯಾಗುವುದು

ಊಟದ ನಂತರ ಸ್ನಾನ ಮಾಡುವಿಕೆಯಿಂದ ರಕ್ತನಾಳಗಳು ಹಿಗ್ಗಿ, ಚರ್ಮಕ್ಕೆ ರಕ್ತ ಸಂಚಾರ ಹೆಚ್ಚುತ್ತದೆ. ಆದರೆ ತಕ್ಷಣ ಸ್ನಾನ ಮಾಡಿದರೆ ದೇಹ ತಂಪಾಗಿ ರಾಸಾಯನಿಕ ಅಂಶವೊಂದು ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಈ ರಾಸಾಯನಿಕ ಅಂಶ ರಕ್ತ ನಾಳಗಳನ್ನು ಹಿಗ್ಗಿಸಿ ರಕ್ತವು ನರಗಳಿಗೆ ಮತ್ತು ಸಣ್ಣ ನರಗಳಿಗೆ ರಭಸದಿಂದ ಸಂಚರಿಸುವಂತೆ ಮಾಡುವುದು, ಈ ಅಧಿಕ ರಕ್ತ ಸಂಚಾರ ರಕ್ತವು ನಿಮ್ಮ ಚರ್ಮದಲ್ಲಿ ಹಾಗೆಯೇ ಉಳಿಯಲು ಕಾರಣವಾಗುತ್ತದೆ. ಇದು ಶರೀರಕ್ಕೆ ಒಳ್ಳೆಯದಲ್ಲ. ಆದ್ದರಿಂದ ಊಟವಾದ ತಕ್ಷಣ ಸ್ನಾನ ಮಾಡಬೇಡಿ.

ತಿಂದ ನಂತರ ಈ ಕಾರ್ಯಗಳನ್ನೂ ಮಾಡಬಾರದು?

ತಿಂದ ತಕ್ಷಣ ಹಲ್ಲುಜ್ಜಬೇಡಿ
ಕೆಲವರು ತಿಂದ ತಕ್ಷಣ ಹಲ್ಲುಜ್ಜುತ್ತಾರೆ, ಈ ರೀತಿ ಮಾಡುವುದರಿಂದ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆ, ಆದರೆ ಈ ಅಭ್ಯಾಸ ಕೂಡ ಒಳ್ಳೆಯದಲ್ಲ, ಇಂದು ದಂತಕ್ಷಯಕ್ಕೆ ಕಾರಣವಾಗುವುದು, ಆದ್ದರಿಂದ ನೀವು ತಿಂದು 30 ನಿಮಿಷದ ಬಳಿಕವಷ್ಟೇ ಹಲ್ಲುಜ್ಜಿ.

ಈಜುವುದು ಮಾಡಬೇಡಿ

ತಿಂದ ತಕ್ಷಣ ಈಜಾಡುವುದು ಕೂಡ ಮಾಡಬೇಡಿ. ಇದು ಕೂಡ ನಿಮ್ಮ ಜೀರ್ಣಕ್ರಿಯೆ ಮೇಲೆ ಅಡ್ಡಪರಿಣಾಮ ಬೀರುವುದು. ನೀವು 30 ನಿಮಿಷ ಅಥವಾ 1 ಗಂಟೆ ಬಿಟ್ಟು ಈಜುವುದು ಮಾಡಿ. ಒಂದೋ ನೀವು ಈಜು ಮಾಡಿ ಬಂದು ಊಟ ಮಾಡಿ ಅಥವಾ ಊಟ ಮಾಡಿದರೆ ಸ್ವಲ್ಪ ಬ್ರೇಕ್ ತೆಗೆದ ಬಳಿಕವಷ್ಟೇ ಈಜಲು ಹೋಗಿ.

ವ್ಯಾಯಾಮ ಮಾಡಬೇಡಿ

ತಿಂದ ತಕ್ಷಣ ವ್ಯಾಯಾಮ ಮಾಡಬೇಡಿ, ತಿಂದು 2 ಗಂಟೆಯ ನಂತರವಷ್ಟೇ ವ್ಯಾಯಾಮ ಮಾಡಬೇಕು, ತಿಂದ ತಕ್ಷಣ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ನಿದ್ದೆ

ಊಟ ಮಾಡಿದ ತಕ್ಷಣ ನಿದ್ದೆ ಮಾಡುವುದು ಒಳ್ಳೆಯದು, ಊಟವಾದ ಒಂದು ಅಥವಾ 2 ಗಂಟೆಯ ಬಳಿಕವಷ್ಟೇ ಊಟ ಮಾಡಿ, ತಿಂದ ತಕ್ಷಣ ಮಲಗುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು, ಇದರಿಂದ ಮೈ ತೂಕ ಕೂಡ ಹೆಚ್ಚಾಗುವುದು, ಆದ್ದರಿಂದ ತುಂಬಾ ತಡವಾಗಿ ಮಲಗುವ ಅಭ್ಯಾಸ ಒಳ್ಳೆಯದಲ್ಲ.

ಆದ್ದರಿಂದ ಊಟವಾದ ಬಳಿಕ ಈ ಬಗ್ಗೆ ಗಮನಹರಿಸಿ, ಈ ರೀತಿ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries