HEALTH TIPS

ಸಾಗರ ಅಧ್ಯಯನದಲ್ಲಿ ಸಾರ್ವಜನಿಕ ಸಹಯೋಗಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದ ಸಿಎಂಎಫ್‍ಆರ್‍ಐ

               ಕೊಚ್ಚಿ: ಸಮುದ್ರ ಮೀನುಗಾರಿಕೆ ಸಂಶೋಧನೆಯಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‍ಆರ್‍ಐ) ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

               ಸಾರ್ವಜನಿಕ ಸಹಭಾಗಿತ್ವದೊಂದಿಗೆ ಭಾರತೀಯ ಕರಾವಳಿಯಲ್ಲಿ ಕಂಡುಬರುವ ಸಮುದ್ರ ಮೀನು ಪ್ರಭೇದಗಳ ಸಂಪೂರ್ಣ ಇಮೇಜ್ ಡೇಟಾಬೇಸ್ ಅನ್ನು ಅಭಿವೃದ್ಧಿಪಡಿಸಲು ''ಒಚಿಡಿಟiಟಿ@ಅಒಈಖI' ಹೆಸರಿನ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.

                ಆ್ಯಪ್ ಭಾರತದ ವಿವಿಧ ಕರಾವಳಿಯಲ್ಲಿ ಪತ್ತೆಯಾದ ಮೀನುಗಳ ಚಿತ್ರಗಳು ಮತ್ತು ಇತರ ಮಾಹಿತಿಯನ್ನು ಅಪ್‍ಲೋಡ್ ಮಾಡಬಹುದು. ಈ ಮಾಹಿತಿಯು ಸಿಎಂಎಫ್‍ಆರ್‍ಐ ಗೆ ಭಾರತೀಯ ನೀರಿನಲ್ಲಿ ಮೀನು ಪ್ರಭೇದಗಳನ್ನು ನಿಖರವಾಗಿ ಗುರುತಿಸಲು ಮತ್ತು ಇತರ ವೈಜ್ಞಾನಿಕ ಮಾಹಿತಿ ಸಂಗ್ರಹಣೆಗೆ ಸಹಾಯ ಮಾಡುತ್ತದೆ. ಇದು ಸಮುದ್ರ ಮೀನುಗಳ ಸಂಗ್ರಹದ ಚಿತ್ರಾತ್ಮಕ ದತ್ತಸಂಚಯವನ್ನು ಸಿದ್ಧಪಡಿಸಲು ದಾರಿ ಮಾಡಿಕೊಡುತ್ತದೆ.

                ಭವಿಷ್ಯದಲ್ಲಿ ಎಐ ನೆರವಿನೊಂದಿಗೆ ಮೊಬೈಲ್ ನಲ್ಲಿ ಚಿತ್ರ ಅಪ್ ಲೋಡ್ ಆದ ತಕ್ಷಣ ಮೀನಿನ ಸಂಪೂರ್ಣ ಮಾಹಿತಿ ದೊರೆಯುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಜಿಯೋಟ್ಯಾಗ್ ಮಾಡುವುದರೊಂದಿಗೆ, ಮೀನಿನ ಜಾತಿಗಳು ಹರಡುವ ನಿಖರವಾದ ಸ್ಥಳವನ್ನು ದಾಖಲಿಸಬಹುದು. ಇದು ಮೀನು ಲಭ್ಯತೆಗೆ ಸಂಬಂಧಿಸಿದ ಅಧ್ಯಯನಗಳನ್ನು ದೋಷರಹಿತವಾಗಿಸಲು ಸಹಾಯ ಮಾಡುತ್ತದೆ.

                  ಸಿಎಂಎಫ್‍ಆರ್‍ಐ ನಿರ್ದೇಶಕ ಡಾ. ಎ. ಗೋಪಾಲಕೃಷ್ಣನ್ ಮಾಹಿತಿ ನೀಡಿ  ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಾರ್ವಜನಿಕರನ್ನು ಸಮುದ್ರ ಸಂಶೋಧನೆಯ ಭಾಗವಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಸಮುದ್ರ ಮೀನು ಸಂಪನ್ಮೂಲಗಳ ರಕ್ಷಣೆಗಾಗಿ

                        ಸಾಗರದ ಜೀವವೈವಿಧ್ಯದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಈ ಮೊಬೈಲ್ ಅಪ್ಲಿಕೇಶನ್ ಸಾಮಾನ್ಯ ಜನರಿಗೆ ಉಪಯುಕ್ತವಾಗಲಿದೆ ಎಂದಿರುವರು.



        ಸಿಎಂಎಫ್‍ಆರ್‍ಐ ಯ ಮೀನುಗಾರಿಕೆ ಸಂಪನ್ಮೂಲ ಮೌಲ್ಯಮಾಪನ, ಅರ್ಥಶಾಸ್ತ್ರ ಮತ್ತು ವಿಸ್ತರಣಾ ಇಲಾಖೆಯ ಡಾ. ಎಲ್ಡೋ ವರ್ಗೀಸ್ ನೇತೃತ್ವದಲ್ಲಿ ಯೋಜನೆಯ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಲ್ಯಾಂಡಿಂಗ್ ಕೇಂದ್ರಗಳಿಂದ ಸೆರೆಹಿಡಿಯಲಾದ ಮೀನುಗಳ ಚಿತ್ರಗಳನ್ನು ಬಳಸಿಕೊಂಡು ಸಿದ್ಧಪಡಿಸಿದ ಡೇಟಾಬೇಸ್ ಭವಿಷ್ಯದಲ್ಲಿ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಪ್ರತಿ ಬಂದರಿನಲ್ಲಿ ಸಮುದ್ರ ಮೀನುಗಳ ಲಭ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಡಾ. ಎಲ್ಡೋ ವರ್ಗೀಸ್ ಹೇಳಿದರು. ಕೃತಕ ಬುದ್ಧಿಮತ್ತೆಯ ಅಲ್ಗಾರಿದಮ್ ಬಳಸಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries