HEALTH TIPS

ಉಳಿದ ಅನ್ನ ಮತ್ತೆ ಸೇವಿಸುತ್ತೀರಾ.? ಈ ಫ್ರೈಡ್ ರೈಸ್ ಸಿಂಡ್ರೋಮ್ ಬಗ್ಗೆಯೂ ತಿಳಿದಿರಲಿ..!

 ಭಾರತದ ಬಹುತೇಕ ಮನೆಗಳಲ್ಲಿ ನಿನ್ನೆ ಉಳಿದ ಅನ್ನವನ್ನು ಮಾರನೆ ದಿನ ಬಳಸುತ್ತಾರೆ. ಅಂದ್ರೆ ಅದನ್ನು ಚಿತ್ರಾನ್ನ, ಪುಳಿಯೋಗರೆ ಸೇರಿ ಏನಾದರು ತಿಂಡಿ ಮಾಡಿ ಸೇವಿಸುತ್ತಾರೆ. ಆದರೆ ಆ ಅನ್ನವನ್ನ ಹಾಳು ಮಾಡುವುದಿಲ್ಲ. ಏನು ಮಾಡಲಿಲ್ಲ ಎಂದರೆ ಹಸುಗಳಿಗೆ ಇಲ್ಲವೆ ನಾಯಿಗಳಿಗೆ ಹಾಕುತ್ತಾರೆ. ಇದು ಎಲ್ಲರ ಮನೆಯಲ್ಲೂ ನಡೆದುಕೊಂಡು ಬಂದಿದೆ.

ಭಾರತದ ಬಹುತೇಕ ಮನೆಗಳಲ್ಲಿ ನಿನ್ನೆ ಉಳಿದ ಅನ್ನವನ್ನು ಮಾರನೆ ದಿನ ಬಳಸುತ್ತಾರೆ. ಅಂದ್ರೆ ಅದನ್ನು ಚಿತ್ರಾನ್ನ, ಪುಳಿಯೋಗರೆ ಸೇರಿ ಏನಾದರು ತಿಂಡಿ ಮಾಡಿ ಸೇವಿಸುತ್ತಾರೆ. ಆದರೆ ಆ ಅನ್ನವನ್ನ ಹಾಳು ಮಾಡುವುದಿಲ್ಲ. ಏನು ಮಾಡಲಿಲ್ಲ ಎಂದರೆ ಹಸುಗಳಿಗೆ ಇಲ್ಲವೆ ನಾಯಿಗಳಿಗೆ ಹಾಕುತ್ತಾರೆ. ಇದು ಎಲ್ಲರ ಮನೆಯಲ್ಲೂ ನಡೆದುಕೊಂಡು ಬಂದಿದೆ.

ವೈದ್ಯರು ಹೇಳುವಂತೆ ಸರಿಯಾಗಿ ಸಂಗ್ರಹಿಸದ ಉಳಿದ ಅನ್ನವನ್ನು ತಿನ್ನುವುದು ವಾಂತಿ ಮತ್ತು ಭೇದಿಯಂತಹ ತೀವ್ರವಾದ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದಂತೆ.

ವೈದ್ಯರು ಹೇಳುವಂತೆ ಸರಿಯಾಗಿ ಸಂಗ್ರಹಿಸದ ಉಳಿದ ಅನ್ನವನ್ನು ತಿನ್ನುವುದು ವಾಂತಿ ಮತ್ತು ಭೇದಿಯಂತಹ ತೀವ್ರವಾದ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದಂತೆ.

ಇನ್ನೂ ಈ ಕಾಯಿಲೆಗಳಿಗೆ ಫ್ರೈಡ್ ರೈಸ್ ಸಿಂಡ್ರೋಮ್ ಎಂದು ಕರೆಯಲಾಗಿದೆ. ಇದು ಅನ್ನದ ವಿಷಕಾರಿ ಅಂಶಗಳು ದೇಹ ಸೇರಿಕೊಳ್ಳುವ ಪ್ರಕ್ರಿಯೆಯಾಗಿದೆ. ಹಾಗಾದರೆ ಈ ರೀತಿ ಆದಾಗ ನಮ್ಮ ದೇಹದಲ್ಲಿ ಏನಾಗುತ್ತದೆ. ಏನಿದು ಫ್ರೈಡ್ ರೈಸ್ ಸಿಡ್ರೋಮ್? ಏನಿದರ ಲಕ್ಷಣ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಫ್ರೈಡ್ ರೈಸ್ ಸಿಂಡ್ರೋಮ್ ಎಂದರೇನು?

ಇದು ಆಹಾರ ವಿಷವಾಗಿ ಮಾರ್ಪಡುವ ಒಂದು ರೀತಿಯ ಪ್ರಕ್ರಿಯೆಯಾಗಿದೆ. ಇದು ಬ್ಯಾಸಿಲಸ್ ಸೆರಿಯಸ್ (B. ಸೆರೆಯಸ್) ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಸೂಕ್ಷ್ಮಾಣು ಅಕ್ಕಿ ಮತ್ತು ಪಾಸ್ಟಾದಂತಹ ಪಿಷ್ಟ ಆಹಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಹೊರಗಿನಿಂದ ಬಂದು ಸೇರುವುದಿಲ್ಲ. ಬದಲಿಗೆ ಅದೇ ಆಹಾರದಲ್ಲಿ ಅತೀ ಕಡಿಮೆ ಸಮಯದಲ್ಲೇ ಜನ್ಮ ತಳೆಯುತ್ತದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಇದರ ಶಕ್ತಿ ಅಧಿಕವಾಗುತ್ತದೆ. ಹೀಗಾಗಿಯೇ ಬೇಸಿಗೆಯಲ್ಲಿ ಆಹಾರಗಳು ಬೇಗ ಕೆಡುತ್ತವೆ.

ನೀವು ಹಳೆಯ ಆಹಾರವನ್ನು ಬಿಸಿ ಮಾಡಿದಾಗಲೂ ಸಹ ಈ ಸೂಕ್ಷ್ಮಾಣು ಹುಟ್ಟಿಕೊಳ್ಳಲು ಆ ತಾಪಮಾನ ಸಾಕಷ್ಟು ಸಹಾಯ ಮಾಡಲಿದೆ. ಅಲ್ಲದೆ ಇವು ಬರಿಗಣ್ಣಿಗೆ ಕಾಣಿಸದಿರುವುದು ಹಾಗೂ ಆರಂಭದಲ್ಲಿ ಇವುಗಳಿಗೆ ವಾಸನೆಯೂ ಇಲ್ಲದಿರುವುದು ಆಹಾರದಲ್ಲಿ ಬೆರೆತಾಗ ಕಂಡುಹಿಡಿಯುವುದು ಕಷ್ಟದ ಕೆಲಸವಾಗುತ್ತದೆ.

ಫ್ರೈಡ್ ರೈಸ್ ಸಿಂಡ್ರೋಮ್ ಲಕ್ಷಣಗಳೇನು?

ಫ್ರೈಡ್ ರೈಸ್ ಸಿಂಡ್ರೋಮ್‌ನ ಲಕ್ಷಣಗಳು ಹೊಟ್ಟೆಯಲ್ಲಿ ಅಸಹಜ ಸ್ಥಿತಿ ಉಂಟಾಗುತ್ತದೆ. ಅಂದರೆ ಜ್ವರ, ವಾಂತಿ, ಬೇಧಿ ಕಾಣಿಸಿಕೊಳ್ಳಲಿದೆ. ಸರಳವಾಗಿ ಹೇಳುವುದಾದರೆ ಇದೊಂದು ಫುಡ್ ಪಾಯಿಸನ್ ಸ್ಥಿತಿಯಾಗಿದೆ. ಕೆಲವರಲ್ಲಿ ಇದು ಉರಿಯೂತ, ಎದೆಯುರಿ, ಗುದದ್ವಾರದಲ್ಲಿ ಉರಿ ಕಾಣಿಸಿಕೊಳ್ಳಬಹುದು.


ಫ್ರೈಡ್ ರೈಸ್ ಸಿಂಡ್ರೋಮ್ ತಡೆಯುವುದು ಹೇಗೆ?

ಫ್ರೈಡ್ ರೈಸ್ ಸಿಂಡ್ರೋಮ್ ಅನ್ನು ತಡೆಗಟ್ಟಲು, ನಿಮ್ಮ ಅಕ್ಕಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ನೀವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ.ವ

ನಿನ್ನೆ ಬಳಸಿರುವ ಅನ್ನವನ್ನು ಮತ್ತೆ ಬಳಸುವುದನ್ನು ಕಡಿಮೆ ಮಾಡಿ. ಫ್ರಿಡ್ಜ್‌ನಲ್ಲಿಟ್ಟ ಆಹಾರವನ್ನು ಬಿಸಿ ಮಾಡಿ ಮತ್ತೆ ಫ್ರಿಡ್ಜ್‌ನಲ್ಲಿ ಇಡಬೇಡಿ. ಜೊತೆಗೆ ಪದೇ ಪದೇ ಒಂದೇ ಪಾತ್ರೆಗೆ ಅದೇ ಆಹಾರ ಹಾಕಿ ಇಡುವ ಅಭ್ಯಾಸ ಬಿಡಿ.

ಪಾತ್ರೆಗಳ ತೊಳೆಯುವಾಗ ಒಳ್ಳೆಯ ಸಾಬೂನು ಇಲ್ಲವೆ ಬಿಸಿನೀರು ಬಳಸಿ. ಹಳೆಯ ಆಹಾರ ಪದಾರ್ಥಗಳು ಪಾತ್ರೆಯಿಂದ ಸಂಪೂರ್ಣವಾಗಿ ಹೊರಹೋಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಒಂದು ವೇಳೆ ಹಳೆಯ ಅನ್ನ ಹೆಚ್ಚು ಉಳಿದಿದೆ ಎಂದಾದರೆ ಅದನ್ನು ಬಿಗಿಯಾದ ಮುಚ್ಚಳವಿರುವ ಪಾತ್ರೆಯಲ್ಲಿ ಹಾಕಿ ಕೆಳಗೆ ತಣ್ಣನೆಯ ನೀರು ಇಟ್ಟು ಅದರೊಳಗೆ ಇಡುವ ಅಭ್ಯಾಸ ಮಾಡಿ. ಇಲ್ಲವೆ ಫ್ರಿಡ್ಜ್‌ನಲ್ಲಿಟ್ಟು ಮಾರನೆ ದಿನ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅದನ್ನು ಆಹಾರವಾಗಿ ಬಳಸಿ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries