HEALTH TIPS

ಸನಾತನ ಧರ್ಮ ಸಹಬಾಳ್ವೆ, ವಸುಧೈವ ಕುಟುಂಬಕಂ ಎಂಬ ಸಂದೇಶ ಸಾರುತ್ತದೆ: ಆದಿತ್ಯನಾಥ್‌

             ಗೋರಕ್‌ಪುರ: ಸನಾತನ ಧರ್ಮವು ಸಹಬಾಳ್ವೆಯಲ್ಲಿ ನಂಬಿಕೆ ಹೊಂದಿದ್ದು, ಇಡೀ ವಿಶ್ವ ಒಂದೇ ಕುಟುಂಬ ಎಂಬ ಸಂದೇಶ ಸಾರುತ್ತದೆ ಎಂದು ಗೋರಕನಾಥ ಪೀಠದ ಮುಖ್ಯಸ್ಥರು ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು.

              ಆರ್‌ಎಸ್‌ಎಸ್‌ ಆಯೋಜಿಸಿದ್ದ ಭಗವಾನ್‌ ನರಸಿಂಗ ರಣಭರಿ ಶೋಭಯಾತ್ರೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

               ಪ್ರತಿ ವರ್ಷ ಹೋಳಿ ಹಬ್ಬದ ಮರುದಿನ ಈ ಶೋಭಾ ಯಾತ್ರೆಯನ್ನು ನಡೆಸಲಾಗುತ್ತದೆ.

ಹೋಳಿ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮತ್ತು ಬಣ್ಣವನ್ನು ನಿರಾಕರಿಸುವವರಿಗೆ ಬಣ್ಣ ಹಚ್ಚಬೇಡಿ ಎಂದು ಅವರು ಜನರಲ್ಲಿ ಮನವಿ ಮಾಡಿದರು.

ಹೋಳಿಯು ಸಾಮರಸ್ಯ ಸಮಾಜ ಸ್ಥಾಪಿಸುವ ಭಾವನೆಯನ್ನು ಸಾಕಾರಗೊಳಿಸುತ್ತದೆ. ಸನಾತನ ಧರ್ಮವು ಸಹಬಾಳ್ವೆ ಮತ್ತು 'ವಸುಧೈವ ಕುಟುಂಬಕಂ'(ಜಗತ್ತು ಒಂದೇ ಕುಟುಂಬ) ಎಂಬ ಸಂದೇಶ ಸಾರುತ್ತದೆ ಎಂದು ಅವರು ಹೇಳಿದರು.

                 ಶತಮಾನಗಳಷ್ಟು ಹಳೆಯದಾದ ಹೋಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸುವ ಮೂಲಕ ನಾವು ನಮ್ಮ ಪರಂಪರೆಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಯೋಗಿ ಆಧಿತ್ಯನಾಥ್ ಹೇಳಿದರು.

                 ದ್ವೇಷವನ್ನು ಕೊನೆಗಾಣಿಸುವುದು ಹಾಗೂ ಸತ್ಯ, ನ್ಯಾಯದ ಹಾದಿಯಲ್ಲಿ ನಡೆಯುವ ಮೂಲಕ ಮಾತ್ರ ನಾವು ಸಮಾಜವನ್ನು ಬಲ‍ಪಡಿಸಬಹುದು. ಎಲ್ಲಿ ವಿಭಜನೆ ಇದೆಯೋ ಅಲ್ಲಿ ಸಮಾಜ ಸದೃಢವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries