HEALTH TIPS

ಯುಎಸ್​ಬಿ ಚಾರ್ಜರ್ ಬಗ್ಗೆ ಎಚ್ಚರ

           ವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಯುಎಸ್​ಬಿ ಚಾರ್ಜರ್ ಬಳಕೆ ಹಗರಣದ ಸ್ವರೂಪ ತಾಳಿದ್ದು ಇದರ ಬಗ್ಗೆ ಎಚ್ಚರದಿಂದ ಇರುವಂತೆ ನಾಗರಿಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್​ಗಳು ಮತ್ತು ಬಸ್ ನಿಲ್ದಾಣಗಳಂಥ ಸಾರ್ವಜನಿಕ ಸ್ಥಳದಲ್ಲಿ ಯುಎಸ್​ಬಿ ಚಾರ್ಜರ್ ಬಳಕೆ ಅಪಾಯಕಾರಿ ಎಂದು ಸರ್ಕಾರ ಹೇಳಿದೆ.

             ಸಾರ್ವಜನಿಕ ಸ್ಥಳಗಳಲ್ಲಿರುವ ಯುಎಸ್​ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ಸೈಬರ್ ಕ್ರಿಮಿನಲ್​ಗಳು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ಕಳವಳಕ್ಕೆ ಕಾರಣವಾಗಿದೆ.

ಜ್ಯೂಸ್-ಜಾಕಿಂಗ್: ಸಾರ್ವಜನಿಕ ಸ್ಥಳಗಳಲ್ಲಿರುವ ವೈರಸ್​ಪೂರಿತ ಯುಎಸ್​ಬಿ ಸ್ಟೇಶನ್​ಗಳ ಚಾರ್ಜಿಂಗ್ ಸಾಧನಗಳು ಬಳಕೆದಾರರನ್ನು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗಳಿಗೆ ಒಳಗಾಗುವಂತೆ ಮಾಡುವ ಸಾಧ್ಯತೆಯಿದೆ.

               ಬಳಕೆದಾರರ ದತ್ತಾಂಶಗಳನ್ನು (ಡಾಟಾ) ಕದಿಯಲು ಅಥವಾ ಯುಎಸ್​ಬಿ ಪೋರ್ಟಲ್​ಗಳಿಗೆ ಕನೆಕ್ಟ್ ಆದ ಸಾಧನಗಳಲ್ಲಿ ಮಾಲ್​ವೇರ್ ಸಂಸ್ಥಾಪಿಸಲು ಸೈಬರ್ ಕ್ರಿಮಿನಲ್​ಗಳು ಬಳಸುವ ಸೈಬರ್ ದಾಳಿ ಕಾರ್ಯತಂತ್ರವನ್ನು ಜ್ಯೂಸ್ ಜಾಕಿಂಗ್ ಎನ್ನುತ್ತಾರೆ. ಯಾವುದೇ ಅನುಮಾನವಿಲ್ಲದ ಬಳಕೆದಾರರು ಈ ಸ್ಥಳಗಳ ಚಾರ್ಜಿಂಗ್ ಪೋರ್ಟಲ್​ಗಳಲ್ಲಿ ತಮ್ಮ ಸಾಧನಗಳನ್ನು ಪ್ಲಗ್ ಮಾಡಿದಾಗ, ಸೈಬರ್ ಕ್ರಿಮಿನಲ್​ಗಳು ಡಾಟಾ ಕದಿಯಲು ಅಥವಾ ಮಾಲ್​ವೇರ್​ಗಳನ್ನು ಸ್ಥಾಪಿಸಲು ಸಾಧ್ಯವಾಗಬಹುದು. ಇದರಿಂದಾಗಿ ವೈಯಕ್ತಿಕ ಮಾಹಿತಿ ಕಳವಾಗಬಹುದು. ಅಲ್ಲದೆ, ಹಣಕಾಸಿನ ಬೇಡಿಕೆಯೊಂದಿಗೆ ಸಾಧನವನ್ನು ಎನ್ಕ್ರಿಪ್ಟ್ ಮಾಡುವ ಅಪಾಯವೂ ಇರುತ್ತದೆ.

              ಸುರಕ್ಷತೆ ಮಾಗೋಪಾಯ: ಇಂಥ ಅಪಾಯಗಳಿಂದ ತಪ್ಪಿಸಿಕೊಳ್ಳಲು ಇಲೆಕ್ಟ್ರಿಕಲ್ ವಾಲ್ ಔಟ್​ಲೆಟ್​ಗಳನ್ನು ಬಳಸುವುದು ಅಥವಾ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್​ಗಳನ್ನು ಒಯ್ಯುವುದು ಸುರಕ್ಷಿತ ದಾರಿಯಾಗಿದೆ. ಬಳಕೆದಾರರು ತಮ್ಮ ಸಾಧನಗಳನ್ನು ಲಾಕ್ ಮಾಡುವುದು ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರ್ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಫೋನ್ ಟರ್ನ್ ಆಫ್ ಆಗಿದ್ದಾಗ ಫೋನ್ ಚಾರ್ಜ್ ಮಾಡುವುದು ಕೂಡ ಸುರಕ್ಷಿತ ಮಾರ್ಗವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries