HEALTH TIPS

ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: ಮೂವರ ಸಾವು

             ಸ್ಲಾಮಾಬಾದ್: ದಕ್ಷಿಣ ಅಫ್ಗಾನಿಸ್ತಾನದ ಕಂದಹಾರ ನಗರದಲ್ಲಿರುವ ಖಾಸಗಿ ಬ್ಯಾಂಕ್‌ನಲ್ಲಿ ಗುರುವಾರ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              ಕಂದಹಾರದಲ್ಲಿರುವ 'ನ್ಯೂ ಕಾಬೂಲ್‌' ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು ಸಂತ್ರಸ್ತರೆಲ್ಲ ವೇತನ ಪಡೆದುಕೊಳ್ಳಲು ಬಂದಿದ್ದರು ಎಂದು ಮಾಹಿತಿ ಮತ್ತು ಸಂಸ್ಕ್ರತಿ ಇಲಾಖೆಯ ಮುಖ್ಯಸ್ಥ ಇನಾಮುಲ್ಲಾ ಸಮಂಗನಿ ತಿಳಿಸಿದ್ದಾರೆ.

             ತಾಲಿಬಾನ್‌ ಗೃಹ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್‌ ಖಾನಿ ಕೂಡ ಬಾಂಬ್‌ ದಾಳಿಯನ್ನು ಖಚಿತಪಡಿಸಿದ್ದಾರೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

                 ತಕ್ಷಣಕ್ಕೆ ಯಾವುದೇ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ತಾಲಿಬಾನ್‌ನ ಪ್ರಮುಖ ಪ್ರತಿಸ್ಪರ್ಧಿಯಾದ 'ದಿ ಇಸ್ಲಾಮಿಕ್‌ ಸ್ಟೇಟ್ ಗ್ರೂಪ್‌' ಈ ಹಿಂದೆ ಶಾಲೆ, ಆಸ್ಪತ್ರೆ ಹಾಗೂ ಮಸೀದಿಗಳಲ್ಲಿ ಬಾಂಬ್‌ ದಾಳಿಗಳನ್ನು ನಡೆಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries