HEALTH TIPS

ಲೋಕಸಮರ: ಆಲತ್ತೂರಿನಲ್ಲಿ ಅಭ್ಯರ್ಥಿಗಳ ಮಧ್ಯೆ ಪ್ರಬಲ ಪೈಪೋಟಿ

                ಆಲತ್ತೂರು ಕ್ಷೇತ್ರ ಚುನಾವಣಾ ಹಿನ್ನೆಲೆಯಲ್ಲಿ ಇದೀಗ ಗಮನ ಸೆಳೆದಿದೆ. ಪ್ರೊ.ಟಿ.ಎನ್. ಸರಸು ಅವರು ಕಣಕ್ಕಿಳಿದಿರುವುದು ಗಮನಾರ್ಹ. 

                 ಅವರು ವಿಕ್ಟೋರಿಯಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದ ದಿನವೇ ಎಸ್‍ಎಫ್‍ಐಗಳು ಸಾಂಕೇತಿಕ ಸಮಾಧಿಯನ್ನು ಸಿದ್ಧಪಡಿಸಿದ ಅದೇ ವ್ಯಾಪ್ತಿಯಲ್ಲಿ ಪ್ರೊ. ಡಾ. ಟಿ.ಎನ್. ಸರಸು ಅವರನ್ನು ಎನ್.ಡಿ.ಎ ಅಭ್ಯರ್ಥಿಯನ್ನಾಗಿಸಿದೆ. 

                   ಹಾಲಿ ಸಂಸದೆ ರಮ್ಯಾ ಹರಿದಾಸ್ ಹಾಗೂ ಎಲ್.ಡಿ.ಎಫ್ ನಿಂದ ಸಚಿವ ಕೆ.  ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿದೆ. ಹಾಲಿ ಸಂಸದೆ ರಮ್ಯಾ ಹರಿದಾಸ್ ಯುಡಿಎಫ್ ಅಭ್ಯರ್ಥಿ.

              ನದಿಗಳು, ಪರ್ವತಗಳು ಮತ್ತು ಭತ್ತದ ಗದ್ದೆಗಳಿಂದ ಆವೃತ್ತವಾಗಿರುವ ಪ್ರದೇಶ,  ಗ್ರಾಮಾಂತರ ವಿಭಾಗವಾಗಿ ಆಲತ್ತೂರು ಮಹತ್ತರವಾದ ಕೇಂದ್ರ. ಆಲತ್ತೂರು ಕೃಷಿ ಪ್ರದೇಶವಾಗಿದ್ದರೂ ಚಹಾ ತೋಟಗಳಾದ ನೆಲ್ಲಿಯಂಪತಿ, ವಾಣಿಜ್ಯ ಕೇಂದ್ರವಾಗಿರುವ ಕುನ್ನಂಕುಳಂ ಇದೇ ವ್ಯಾಪ್ತಿಯಲ್ಲಿರುವುದು ವಿಶೇಷ. ಕ್ಷೇತ್ರ ಪುನರ್ ವಿಂಗಡಣೆ ನಂತರ 2009 ರಿಂದ ಆಲತ್ತೂರು ಕ್ಷೇತ್ರ ರೂಪಿತವಾಯಿತು. ಆಲತ್ತೂರ್ ಪಾಲಕ್ಕಾಡ್ ಜಿಲ್ಲೆಯ ಚಿತ್ತೂರು, ನೆನ್ಮಾರಾ, ತರೂರ್, ಅಲತ್ತೂರ್ ಮತ್ತು ತ್ರಿಶೂರ್ ಜಿಲ್ಲೆಯ ಚೇಲಕ್ಕರ, ಕುನ್ನಂಕುಳಂ ಮತ್ತು ವಡಕ್ಕಂಚೇರಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

              ಒಟ್ಟಪಾಲಂ ಕ್ಷೇತ್ರದ ಚುನಾವಣಾ ಇತಿಹಾಸ 1977ರಲ್ಲಿ ಆರಂಭವಾಗುತ್ತದೆ. 1977ರ ಚುನಾವಣೆಯಲ್ಲಿ ಕೆ. ಕುಂಞಂಬು ಮೂಲಕ ಕಾಂಗ್ರೆಸ್ ಮೊದಲ ಗೆಲುವು ಸಾಧಿಸಿತು. 1979ರಲ್ಲಿ ಅಂದಿನ ಎಸ್‍ಎಫ್‍ಐ ನಾಯಕ ಎ.ಕೆ.ಬಾಲನ್ ಜಯಗಳಿಸಿದ್ದರು.  1984ರ ಚುನಾವಣೆಯಲ್ಲಿ ಕೆ.ಆರ್. ನಾರಾಯಣನ್ ಅವರ ಮೂಲಕ ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ಗೆದ್ದುಕೊಂಡಿತು. ಮುಂದಿನ ಎರಡು ಚುನಾವಣೆಯಲ್ಲಿ ಕೆ.ಆರ್. ನಾರಾಯಣ ಜಯಗಳಿಸಿದ್ದರು. 

               ಕೆ.ಆರ್ ನಾರಾಯಣನ್ ಉಪರಾಷ್ಟ್ರಪತಿಗಳಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಸಿಪಿಎಂನ ಎಸ್. ಶಿವರಾಮನ್ ಆಯ್ಕೆಯಾದರು. 1996 ರಿಂದ 2004 ರವರೆಗಿನ ಚುನಾವಣೆಯಲ್ಲಿ ಸಿಪಿಎಂನ ಎಸ್. ಅಜಯಕುಮಾರ್ ನಿರಂತರ ಯಶಸ್ಸು ಸಾಧಿಸಿದರು.

              2009 ಮತ್ತು 2014ರಲ್ಲಿ ಸಿಪಿಎಂನ ಪಿ.ಕೆ. ಬಿಜು ಗೆದ್ದರು ಆದರೆ ಆಲತ್ತೂರ್ 2019 ರಲ್ಲಿ ಮತ್ತೆ ಯುಡಿಎಫ್‍ನ ಪಾಲಾಯಿತು.  ರಮ್ಯಾ ಹರಿದಾಸ್ 1,58,968 ಮತಗಳಿಂದ ಜಯಗಳಿಸಿದ್ದರು. ಎನ್ ಡಿಎಯ ಘಟಕ ಪಕ್ಷವಾದ ಬಿಡಿಜೆಎಸ್ ನಲ್ಲಿ ಟಿ.ವಿ. ಬಾಬು 2019ರಲ್ಲಿ 89,837 ಮತಗಳನ್ನು ಪಡೆದಿದ್ದರು.

               ಭತ್ತ ಖರೀದಿ ಅವ್ಯವಸ್ಥೆ, ಕಾಡುಪ್ರಾಣಿಗಳ ಹಾವಳಿ, ಕುಡಿಯುವ ನೀರಿನ ಸಮಸ್ಯೆ, ಲೈಫ್ ಮಿಷನ್ ಫ್ಲಾಟ್ ವಿವಾದ, ಸಹಕಾರಿ ಕ್ಷೇತ್ರದಲ್ಲಿನ ವಂಚನೆ ಸೇರಿದಂತೆ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಹಲವು ದೊಡ್ಡ, ಸಣ್ಣ ಸಮಸ್ಯೆಗಳನ್ನು ಕ್ಷೇತ್ರ ಇಂದು ಎದುರಿಸುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries