HEALTH TIPS

ನವೋದಯ ಚಳುವಳಿಯ ನಿರಂತರತೆ; ಸಂನ್ಯಾಸಿ ಸಂಗಮದಿಂದ ಐತಿಹಾಸಿಕ ನಿರ್ದೇಶನಗಳ ಒಕ್ಕೊರಲ ಒತ್ತಾಯ

                ತ್ರಿಶೂರ್: ಮಾರ್ಗದರ್ಶಕ ಮಂಡಲದ ಆಶ್ರಯದಲ್ಲಿ ತ್ರಿಶೂರಿನಲ್ಲಿ ನಡೆದ ಸನ್ಯಾಸಿ ಸಂಗಮ ನಿನ್ನೆ ಮುಕ್ತಾಯಗೊಂಡಿತು. 

                 ನವೋದಯ ಮೌಲ್ಯಗಳಿಗೆ ಬದ್ಧವಾಗಿ, ಆಚರಣೆಗಳಲ್ಲಿ ಸಕಾಲಿಕ ಸುಧಾರಣೆಗಳ ಸಲಹೆ ಗಮನಾರ್ಹವಾಗಿದೆ. ಕಾನೂನಿನಿಂದಾಗಿ ಜಾತೀಯತೆ ಕೊನೆಗೊಂಡಿದ್ದರೂ ಇಂದಿಗೂ ಮುಂದುವರಿದಿರುವ ತಾರಮ್ಯ ಅನೈತಿಕವಾಗಿದ್ದು, ಅದನ್ನು ತಡೆಯಬೇಕು ಎಂದು ಸನ್ಯಾಸಿ ಸಮುದಾಯ ಗಮನಸೆಳೆದಿದ್ದಾರೆ.                ಜಾತಿ ತಾರತಮ್ಯವನ್ನು ಮನಸ್ಸಿನಿಂದಲೂ ಸಂಪೂರ್ಣವಾಗಿ ತೊಲಗಿಸಬೇಕು. ದೇವಾಲಯಗಳ ಸುತ್ತ ಕೇಂದ್ರೀಕೃತವಾಗಿರುವ ಅನೇಕ ಆಚರಣೆಗಳನ್ನು ಕಾಲಕ್ಕೆ ಅನುಗುಣವಾಗಿ ಮಾರ್ಪಡಿಸಬೇಕು ಎಂದು ಸನ್ಯಾಸಿ ಸಂಗಮ ಒತ್ತಾಯಿಸಿತು.

              ದೇವಾಲಯಗಳನ್ನು ಸೇವಾ ಚಟುವಟಿಕೆಗಳು ಮತ್ತು ಆಧ್ಯಾತ್ಮಿಕ ಸಾಧನಗಳ ಕೇಂದ್ರಗಳಾಗಿ ಪರಿವರ್ತಿಸುವ ಪ್ರಸ್ತಾಪವು ಕೇರಳ ಸಮಾಜದಲ್ಲಿ ಐತಿಹಾಸಿಕ ಬದಲಾವಣೆಗಳನ್ನು ಸೃಷ್ಟಿಸುವುದು ಖಚಿತ. ಕೇರಳದಲ್ಲಿ ಇಷ್ಟೊಂದು ಸನ್ಯಾಸಿಗಳು ಒಂದೆಡೆ ಸೇರಿ ಸಮ್ಮೇಳನ ಹಾಗೂ ನಿರ್ಣಯ ಕೈಗೊಳ್ಳುತ್ತಿರುವುದು ಇದೇ ಮೊದಲು. ಹಿಂದೂ ಸಮುದಾಯದ ಐಕ್ಯತೆಗಾಗಿ ಜೊತೆಯಾಗುವ ಅಗತ್ಯತೆಯನ್ನು ಸನ್ಯಾಸಿ ಸಂಗಮ ಗಮನಾರ್ಹಗೊಳಿಸುತ್ತದೆ.

              ಶ್ರೀ ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಶಿವಗಿರಿ ಮಠ ಮತ್ತು ಮಾತಾ ಅಮೃತಾನಂದಮಯಿ ಮಠದ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಸಭೆಯಲ್ಲಿ ಭಾಗವಹಿಸಿದ್ದರು. ಕೇರಳದ ಎಲ್ಲ ಸಂಪ್ರದಾಯಗಳ ಸನ್ಯಾಸಿಗಳು ಸಮ್ಮೇಳನಕ್ಕೆ ಆಗಮಿಸುತ್ತಿರುವುದು ಇದೇ ಮೊದಲು. ದೇವಸ್ಥಾನಗಳಲ್ಲಿ ತುಲಾಭಾರ ಮುಂತಾದ ಆಚರಣೆಗಳನ್ನು ನಿಲ್ಲಿಸಬೇಕು ಎಂದು ಸಂನ್ಯಾಸಿ ಸಂಗಮ ಅಂಗೀಕರಿಸಿದ ನಿರ್ಣಯ. ಪುರುಷರಿಗೆ ಅಂಗಿ ಧರಿಸಿ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಬೇಕು. ಯಾವುದೇ ಆಧಾರವಿಲ್ಲದ ಕೆಲವು ಆಚರಣೆಗಳನ್ನು ಕುರುಡಾಗಿ ಅನುಸರಿಸುವುದನ್ನು ನಿಲ್ಲಿಸಬೇಕು ಎಂಬುದು ನಿರ್ಣಯದ ಸಾರವಾಗಿದೆ.

              ಮಾರ್ಗದರ್ಶಕ ಮಂಡಲದ ಅಧ್ಯಕ್ಷ ಸ್ವಾಮಿ ಚಿದಾನಂದಪುರಿ, ದೇವಾಲಯದ ಆಚರಣೆಗಳು ಮತ್ತು ಕುರುಡು ನಿಯಮಗಳನ್ನು ಕೇಂದ್ರವಾಗಿಟ್ಟುಕೊಂಡು ಬದಲಾವಣೆಗಳ ಬಗ್ಗೆ ಹೆಚ್ಚಿನ ಚರ್ಚೆಗೆ ಅವಕಾಶ ನೀಡಬೇಕು ಎಂದರು. ಮಠಾಧೀಶರು ಮಂಡಿಸುವ ಈ ಅಭಿಪ್ರಾಯಗಳನ್ನು ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಇತರರು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬುದು ಮಾರ್ಗದರ್ಶ ಮಂಡಳದ ಅಭಿಪ್ರಾಯ. ದೇವಾಲಯದ ತಂತ್ರಿಗಳು, ಪೂಜಾರಿಗಳು, ದೇವಾಲಯ ಸಮಿತಿಗಳು, ದೇವಸ್ವಂ ಮಂಡಳಿ ಮುಂತಾದವರು ಈ ವಿಷಯಗಳ ಬಗ್ಗೆ ಚರ್ಚಿಸಿ ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು. ಮಾರ್ಗದರ್ಶಕ ಮಂಡಲದ ಸಂನ್ಯಾಸಿ ಸಂಗಮವು ಕೈಗೊಂಡ ನಿರ್ಣಯಗಳು ಶ್ರೀ ನಾರಾಯಣ ಗುರುದೇವ ಮತ್ತು ಚಟ್ಟಂಬಿಸ್ವಾಮಿಯವರು ಪ್ರಾರಂಭಿಸಿದ ಪುನರುಜ್ಜೀವನವನ್ನು ಮುಂದುವರಿಸುವ ಪ್ರಕ್ರಿಯೆ ಎಂದು ಸ್ವಾಮಿ ಚಿದಾನಂದಪುರಿ ಸೂಚಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries