HEALTH TIPS

ಭೂ ಕಬಳಿಕೆ ಪ್ರಕರಣ ಮುಖ್ಯ ಆರೋಪಿ ಶಹಜಹಾನ್ ಬಂಧಿಸಿದ ಇಡಿ!

             ಕೋಲ್ಕತ್ತಾ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್​​ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

             ತನಿಖಾ ಸಂಸ್ಥೆ ಅಧಿಕಾರಿಗಳು ಅವರನ್ನು ಪ್ರಸ್ತುತ ಬಸಿರ್‌ಹತ್ ಜೈಲಿನಲ್ಲಿ ವಿಚಾರಣೆ ನಡೆಸಿದ ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಗ್ರಾಮದಲ್ಲಿ ಅನೇಕ ಮಹಿಳೆಯರು ಶೇಖ್ ಷಹಜಹಾನ್ ಮತ್ತು ಅವರ ಸಹಚರರ ಮೇಲೆ ಭೂಹಗರಣ ಮತ್ತು ಬಲವಂತದ ಅಡಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದರು.

                ಜನವರಿ 5ರಂದು ಮುಂಜಾನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಂದೇಶ್‌ಖಾಲಿಯಲ್ಲಿರುವ ಆರೋಪಿ ಶೇಖ್‌ ಶಹಜಹಾನ್‌ ನಿವಾಸಕ್ಕೆ ದಾಳಿ ನಡೆಸಲು ಆಗಮಿಸಿದ್ದರು. ಬಹುಕೋಟಿ ರೂ. ಪಡಿತರ ವಿತರಣೆ ಹಗರಣದಲ್ಲಿ ತಲೆಮರೆಸಿಕೊಂಡಿದ್ದ ಟಿಎಂಸಿಯ ಪ್ರಭಾವಶಾಲಿ ನಾಯಕ, ಜಿಲ್ಲಾ ಪರಿಷತ್‌ ಸದಸ್ಯನೂ ಆಗಿದ್ದ ಶೇಖ್‌ ಶಹಜಹಾನ್ ಮನೆಗೆ ಇಡಿ ಅಧಿಕಾರಿಗಳು ದಾಳಿಯಿಟ್ಟಿದ್ದರು. ಆದರೆ ಕೂಡಲೇ ಅಲ್ಲಿ ಶಹಜಹಾನ್‌ನ ಬೆಂಬಲಿಗರು ಸೇರಿ ಇ.ಡಿ ಅಧಿಕಾರಿಗಳನ್ನು ತಡೆದದ್ದಲ್ಲದೆ, ಹಲ್ಲೆ ನಡೆಸಿದ್ದರು. ಅಧಿಕಾರಿಗಳು ಹೇಗೋ ಜೀವ ಉಳಿಸಿಕೊಂಡು ಅಲ್ಲಿಂದ ಪರಾರಿಯಾಗಬೇಕಾಯಿತು. ಇದಾದ ಬಳಿಕ ಶಹಜಹಾನ್‌ ಅಲ್ಲಿಂದಲೂ ನಾಪತ್ತೆಯಾಗಿದ್ದ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್​​ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ಅವರನ್ನು ತೃಣಮೂಲ ಕಾಂಗ್ರೆಸ್ ಅಮಾನತು ಮಾಡಿತ್ತು. ಪಶ್ಚಿಮ ಬಂಗಾಳ ಪೊಲೀಸರು ಆತನನ್ನು ಬಂಧಿಸಿದ ಕೆಲವೇ ಗಂಟೆಗಳ ಬಳಿಕ ಪಕ್ಷವು ಷಹಜಹಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಪ್ರಕಟಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries