ಮಂಜೇಶ್ವರ: ವರ್ಕಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್ 29 ರಿಂದ ಎಪ್ರಿಲ್ 5 ರ ವರೆಗೆ ಜರಗುವ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಹೊರೆಕಾಣಿಕೆ ಕಾರ್ಯಾಲಯವನ್ನು(ಸಂಗ್ರಹಣಾ) ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ವರ್ಕಾಡಿ ಸುಂಕದಕಟ್ಟೆ ಯ ಸಮೀಪವಿರುವ ನಂದ ಕುಮಾರ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.
ಶ್ರೀ ಕ್ಷೇತ್ರದ ಅರ್ಚಕ ವಾಸುದೇವ ಮಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗು ಬ್ರಹ್ಮಕಲಶ ಸಮಿತಿಯ ಪದಾಧಿಕಾರಿಗಳಾದ ದುರ್ಗಾದಾಸ್ ಭಂಡಾರಿ, ಸುಭಾಶ್ಚಂದ್ರ ಅಡಪ್ಪ ಕಲ್ಲೂರು, ವಿಕ್ರಮ್ ದತ್ತ, ಪ್ರಭಾಕರ ರೈ, ಶ್ಯಾಂ ವಿಠಲ್ ಕೋಡಿ, ರಾಧಾಕೃಷ್ಣ ಹೊಳ್ಳ ಕೋಡಿ, ವಿನೋದ್ ಪಾವೂರು, ಸದಾಶಿವ ನಾೈಕ್ ಮಂಟಮೆ, ವಿವೇಕಾನಂದ ಶೆಟ್ಟಿ, ರಾಧಾಕೃಷ್ಣ ಹೊಳ್ಳ ಕೋಡಿ, ಆನಂದ ತಚ್ಚಿರೆ, ಸೀತಾರಾಂ ಬೇರಿಂಜ, ನಾಗೇಶ್ ಬಳ್ಳೂರು, ಸರಸ್ವತಿ ಹೊಳ್ಳ, ನಂದ ಕುಮಾರ್ ಉಪಸ್ಥಿತರಿದ್ದರು.




.jpg)
