ವಯನಾಡು: ಪೂಕೋಡ್ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸಿದ್ಧಾರ್ಥ್ ಸಾವಿನ ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪವನ್ನು ಸೇರಿಸಲಾಗಿದೆ.
ಆರೋಪಿಗಳ ವಿರುದ್ಧ 120ಬಿ ಆರೋಪ ಮಾಡಲಾಗಿದೆ. ಆರೋಪಿಗಳ ವಿರುದ್ಧ ಪಿತೂರಿ ಮತ್ತು ಕೊಲೆ ಯತ್ನದ ಆರೋಪ ಹೊರಿಸದಿದ್ದಕ್ಕಾಗಿ ಪೋಲೀಸರು ಈ ಹಿಂದೆ ಭಾರೀ ಟೀಕೆಗೆ ಗುರಿಯಾಗಿದ್ದರು.
ಮೊದಲ ಹಂತದಲ್ಲಿ ಆರೋಪಿಗಳ ವಿರುದ್ಧ ಹಲ್ಲೆ, ತಡೆ, ಆತ್ಮಹತ್ಯೆಗೆ ಪ್ರಚೋದನೆ ಹಾಗೂ ರ್ಯಾಗಿಂಗ್ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇದರೊಂದಿಗೆ ಸಂಚು ಮತ್ತು ಹತ್ಯೆ ಯತ್ನವನ್ನೂ ಸೇರಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಮನೆಗೆ ಹೋಗಿದ್ದ ಸಿದ್ಧಾರ್ಥ್ ನನ್ನು ಉದ್ದೇಶಪೂರ್ವಕವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ಬಳಿಕ ನಡೆದ ಥಳಿತದ ಹಿಂದೆ ಸ್ಪಷ್ಟ ಷಡ್ಯಂತ್ರ ಇರುವುದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ.





