ತಿರುವನಂತಪುರ: ಕಾಂಗ್ರೆಸ್ ಪಕ್ಷ ಕಡೆಗಣಿಸಿದ್ದರಿಂದ ಪಕ್ಷ ಬಿಡಲು ಕಾರಣ ಎಂದು ಪದ್ಮಜಾ ವೇಣುಗೋಪಾಲ್ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಇನ್ನಷ್ಟು ನಾಯಕರು ಬರಲಿದ್ದಾರೆ ಎಂದವರು ಬಿಜೆಪಿ ಸೇರ್ಪಡೆಗೊಂಡ ಬಳಿಕ ತಿರುವನಂತಪುರಂನಲ್ಲಿ ನಿನ್ನೆ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾನು ಮೂರು ವರ್ಷಗಳ ಹಿಂದೆಯೇ ಪಕ್ಷ ತೊರೆಯಲು ನಿರ್ಧರಿಸಿದ್ದೆ ಎಂದು ಪದ್ಮಜಾ ಹೇಳಿದ್ದಾರೆ.
ಬಿಜೆಪಿ ಸೂಚಿಸಿದರೆ ಕೆ ಮುರಳೀಧರನ್ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಪದ್ಮಜಾ ಹೇಳಿದ್ದಾರೆ. ಪಕ್ಷ ಬಿಡುವ ನಿರ್ಧಾರಕ್ಕೂ ಮುನ್ನ ಕೆಸಿ ವೇಣುಗೋಪಾಲ್ ಗೆ ಹಲವು ಬಾರಿ ಕರೆ ಮಾಡಿದ್ದೆ. ಆದರೆ ಅವರು ಪೋನ್ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ ಎಂದರು.
ಬಿಜೆಪಿ ಯಾವುದೇ ಸೀಟು ಭರವಸೆ ನೀಡಿಲ್ಲ.ಕಾಂಗ್ರೆಸ್ ಗೆ ವಾಪಸ್ ಹೋಗುವುದಿಲ್ಲ.ಕಾಂಗ್ರೆಸ್ ನಿಂದ ಸಾಕಷ್ಟು ಸಮಸ್ಯೆ ಎದುರಿಸಿದೆ. ಯಾರೂ ಸಹಾಯ ಮಾಡಲಿಲ್ಲ. ಕೆಪಿಸಿಸಿ ಅಧ್ಯಕ್ಷರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದೆ ಎಂದು ಪದ್ಮಜಾ ಹೇಳಿದ್ದಾರೆ.
ಕಾಂಗ್ರೆಸ್ ಮಹಿಳೆಯರನ್ನು ಒಪ್ಪಿಕೊಳ್ಳುವುದಿಲ್ಲ. ಮಹಿಳೆಯರ ಹೆಸರು ಕೇಳಿದರೆ ನಾಯಕರಿಗೆ ತಿರಸ್ಕಾರ ಭಾವ ಮೂಡುತ್ತದೆ ಎಂದು ಪದ್ಮಜಾ ಹೇಳಿದರು.
ಚುನಾವಣೆಗೆಂದು ಕಾಂಗ್ರೆಸ್ ನಾಯಕರು ಹಲವರಿಂದ ಹಣ ಪಡೆದಿದ್ದಾರೆ ಎಂದು ಪದ್ಮಜಾ ಆರೋಪಿಸಿದ್ದಾರೆ. ಪ್ರಿಯಾಂಕಾ ಕಾರ್ಯಕ್ರಮಕ್ಕೆ ತನ್ನ ಕೈಯಿಂದ 50 ಲಕ್ಷ ಕೇಳಿದ್ದರು. 22 ಲಕ್ಷ ಪಾವತಿಸಲಾಗಿದೆ. ಅಂದು ಮೋಟಾರು ಪ್ರವಾಸದಲ್ಲಿ ಪ್ರಿಯಾಂಕಾ ಜೊತೆ ಸೇರಬಹುದೇ ಎಂದು ಡಿಸಿಸಿ ಅಧ್ಯಕ್ಷರಲ್ಲಿ ಕೇಳಿದಾಗ ಕುಪಿತರಾಗಿದ್ದರೆಂದು ಪದ್ಮಜ ಆರೋಪಿಸಿದರು.


