HEALTH TIPS

ಅಭ್ಯರ್ಥಿಯ ಕುರಿತಾದ ಹೆಚ್ಛಿನ ಮಾಹಿತಿಗೆ 'ನೋ ಯುವರ್ ಕ್ಯಾಂಡಿಡೇಟ್-(ಕೆವೈಸಿ)ಅಪ್ಲಿಕೇಶನ್


                     ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು 'ನೋ ಯುವರ್ ಕ್ಯಾಂಡಿಡೇಟ್'(ಕೆವೈಸಿ) ಎಂಬ ಮೊಬೈಲ್ ಅಪ್ಲಿಕೇಶನ್ ಕಾರ್ಯಾಚರಿಸುತ್ತಿದೆ. 

                       ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳ ಹಿನ್ನೆಲೆ ಮತ್ತು ಪ್ರಮಾಣ ಪತ್ರ ಎಂಬಿವುಗಳ ಬಗ್ಗೆ ಮಾಹಿತಿ ಪಡೆಯಲು ಮತದಾರರು ಉಪಯೋಗಿಸುವ ಬಳಕೆದಾರ ಸ್ನೇಹಿ ಮೊಬೈಲ್ ಆ್ಯಪ್ ಇದಾಗಿದೆ. ಮತದಾರರು ಅಭ್ಯರ್ಥಿಗಳ ಹೆಸರನ್ನು ಬಳಸಿಕೊಂಡು  ಅಭ್ಯರ್ಥಿಗಳು ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳು ಮತ್ತು ಅವುಗಳ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐ ಓ ಎಸ್  ಪ್ಲಾಟ್‍ಫಾರ್ಮ್‍ಗಳಿಂದ ಅಪ್ಲಿಕೇಶನ್ ಡೌನ್‍ಲೋಡ್ ಮಾಡಬಹುದು.

               ಮತದಾರರಿಗೆ ಚುನಾವಣಾ ಆಯೋಗದ ವೆಬ್‍ಸೈಟ್  electoralsearch.eci.gov.in ಮೂಲಕ ತಮ್ಮ ಮತಗಟ್ಟೆಯನ್ನು  ಕಂಡುಹಿಡಿದು,  ತಮ್ಮ ಸಮೀಪದ ಮತಗಟ್ಟೆಗಳನ್ನು ಕಂಡುಹಿಡಿದು ಮತದಾನ ಮಾಡಬಹುದು.  ವೆಬ್ ಸೈಟ್ ನಲ್ಲಿ ಜನ್ಮದಿನಾಂಕ, ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದ ಮಾಹಿತಿ ನಮೂದಿಸಿ ಸಮೀಪದ ಮತಗಟ್ಟೆ ಯಾವುದು ಎಂದು ತಿಳಿಯಬಹುದು.

                ವೆಬ್‍ಸೈಟ್‍ನಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ಮಾತ್ರ ನಮೂದಿಸಿ ಮತಗಟ್ಟೆ ಪತ್ತೆ ಮಾಡುವ ವ್ಯವಸ್ಥೆಯೂ ಜಾರಿಯಲ್ಲಿದೆ. ಮತದಾರರ ಗುರುತು ಚೀಟಿಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ನೀಡಿದರೂ ಮಾಹಿತಿ ಪಡೆಯಬಹುದುದಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries