ಮಂಜೇಶ್ವರ: ವಿದ್ಯುತ್ ಶಾಕ್ ತಗುಲಿ ವರ್ಕ್‍ಶಾಪ್ ಕಾರ್ಮಿಕ, ಹೊಸಂಗಡಿ ಅಂಗಡಿಪದವು ನಿವಾಸಿ ಅಶೋಕ್-ಕಲಾವತೀ ದಂಪತಿ ಪುತ್ರ ಪ್ರಜ್ವಲ್(25)ಮೃತಪಟ್ಟಿದ್ದಾರೆ. ವರ್ಕ್‍ಸಪ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ವಿದ್ಯುತ್ ಶಾಕ್ ತಗಲುತ್ತಿದ್ದಂತೆ ಪ್ರಜ್ವಲ್ ಬೊಬ್ಬಿಟ್ಟಿದ್ದಾರೆ. ತಕ್ಷಣ ವಿದ್ಯುತ್ ಸಂಪರ್ಕ ವಿಚ್ಛೇದಿಸಿ, ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


