HEALTH TIPS

ಲೋಕಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರು ಇವರು

           ವದೆಹಲಿ: ಬರಲಿರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು 195 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಹಲವು ಹೊಸ ಮುಖಗಳಿಗೆ ಮತ್ತು ಯುವಕರಿಗೆ ಆದ್ಯತೆ ನೀಡಿದೆ.

             ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ.

            ದಿ. ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ನವದೆಹಲಿಯಿಂದ ಹಾಗೂ ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡ ಕೇರಳದ ದಿ. ಎ.ಕೆ.ಆಯಂಟನಿ ಪುತ್ರ ಆನಿಲ್ ಕೆ. ಆಯಂಟನಿ ಅವರನ್ನು ಪತ್ತನಮಿತ್ತಿಟ್ಟ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸುವುದಾಗಿ ಘೋಷಿಸಿದೆ. ಇದರಂತೆ ಟಿಕೆಟ್ ಪಡೆದ ಪಕ್ಷದ ಪ್ರಮುಖರ ಪಟ್ಟಿ ಇಂತಿದೆ.

ಆನಿಲ್ ಕೆ. ಆಯಂಟನಿ ಮತ್ತು ಬಾನ್ಸುರಿ ಸ್ವರಾಜ್

ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
  • ಪ್ರಧಾನಿ ನರೇಂದ್ರ ಮೋದಿ- ವಾರಾಣಸಿ

    • ರಕ್ಷಣಾ ಸಚಿವ ರಾಜನಾಥ್ ಸಿಂಗ್- ಲಖನೌ

    • ಗೃಹ ಸಚಿವ ಅಮಿತ್ ಶಾ- ಗಾಂಧೀನಗರ

    • ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ- ಗುನಾ

    • ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ- ಅಮೇಠಿ

    • ಲೋಕಸಭಾ ಸ್ಪೋಕರ್ ಓಂ ಬಿರ್ಲಾ- ಕೊಟಾ

    • ನಟಿ ಹೇಮಾ ಮಾಲಿನಿ- ಮಥುರಾ

    • ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್- ವಿಧಿಶಾ

    • ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್- ಅಲ್ವಾರಾ

    • ಕಿರೆಣ್ ರಿಜುಜು- ಅರುಣಾಚಲ ಪಶ್ಚಿಮ

    • ಡಾ. ಜಿತೇಂದ್ರ ಸಿಂಗ್- ಉದಮ್‌ಪುರ್

    • ಎಲೆಕ್ಟ್ರಾನಿಕ್ಸ್, IT ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್- ತಿರುವನಂತಪುರ

ಕ್ಷೇತ್ರ ಕಳೆದುಕೊಂಡವರು

ಚಾಂದಿನಿ ಚೌಕ್‌ನ ಸಂಸದ ಹರ್ಷವರ್ಧನ್ ರಾಥೋಡ್

ನವದಹೆಲಿ ಸಂಸದೆ ಮೀನಾಕ್ಷಿ ಲೇಖಿ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries