HEALTH TIPS

ಜಿಲ್ಲೆಯಲ್ಲಿ ಮನೆಮನೆ ಮತದಾನ- ಮೊದಲ ದಿನ 1208 ಮಂದಿಯಿಂದ ಮತ ಚಲಾವಣೆ

                     ಕಾಸರಗೋಡು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮನೆ ಮನೆ ಮತದಾನ ಮಾಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಮೊದಲ ದಿನ 1208 ಮಂದಿ ತಮ್ಮ ಮತ ಚಲಾಯಿಸಿದ್ದಾರೆ.

                 ಮಂಜೇಶ್ವರ ಕ್ಷೇತ್ರದಲ್ಲಿ 21, ಕಾಸರಗೋಡು ಕ್ಷೇತ್ರದಲ್ಲಿ 113 ಮತ್ತು ಉದುಮ ಕ್ಷೇತ್ರದಲ್ಲಿ 341, ಕಾಞಂಗಾಡು ಕ್ಷೇತ್ರದಲ್ಲಿ 195, ತ್ರಿಕರಿಪುರ ಕ್ಷೇತ್ರದಲ್ಲಿ 169, ಪಯ್ಯನ್ನೂರು ಕ್ಷೇತ್ರದಲ್ಲಿ 227 ಹಾಗೂ ಕಲ್ಯಾಸೇರಿ ಕ್ಷೇತ್ರದಲ್ಲಿ 142 ಮಂದಿ ಮತ ಚಲಾಯಿಸಿದ್ದಾರೆ.

           ಏಪ್ರಿಲ್ 23ರವರೆಗೆ ಮನೆ ಮತದಾನ ನಡೆಯಲಿದೆ.

           ಜಿಲ್ಲೆಯಲ್ಲಿ 3687 ವಿಕಲಚೇತನರು ಹಾಗೂ 85 ವರ್ಷ ಮೇಲ್ಪಟ್ಟ 5467 ಮಂದಿ ಸೇರಿದಂತೆ 9154 ಮಂದಿ ಮನೆಯಲ್ಲೇ ಮತದಾನ ಮಾಡಲು ಅರ್ಹರಾದವರಿದ್ದಾರೆ. ಮಂಜೇಶ್ವರಂ ಕ್ಷೇತ್ರದಲ್ಲಿ 690 ವಿಕಲಚೇತನರು ಹಾಗೂ 327 ಹಿರಿಯ ನಾಗರಿಕರಿದ್ದಾರೆ. ಕಾಸರಗೋಡುಕ್ಷೇತ್ರದಲ್ಲಿ 456 ವಿಕಲಚೇತನರು ಹಾಗೂ 324 ಹಿರಿಯ ನಾಗರಿಕರಿದ್ದಾರೆ. ಉದುಮ ಕ್ಷೇತ್ರದಲ್ಲಿ 709 ವಿಕಲಚೇತನರು, 616 ಹಿರಿಯ ನಾಗರಿಕರು,  ಕಾಞಂಗಾಡು ಕ್ಷೇತ್ರದಲ್ಲಿ 547 ವಿಕಲಚೇತನರು, 931 ಮಂದಿ ಹಿರಿಯ ನಾಗರಿಕರು, ತ್ರಿಕರಿಪುರ ಕ್ಷೇತ್ರದಲ್ಲಿ 567 ವಿಕಲಚೇತನರು ಮತ್ತು 892 ಹಿರಿಯ ನಾಗರಿಕರು, ಪಯ್ಯನ್ನೂರು ಕ್ಷೇತ್ರದಲ್ಲಿ 419 ವಿಕಲಚೇತನರು ಮತ್ತು 1178 ಹಿರಿಯ ನಾಗರಿಕರು, ಕಲ್ಯಾಶ್ಸೆರಿ ಕ್ಷೇತ್ರದಲ್ಲಿ 299 ವಿಕಲಚೇತನರು ಮತ್ತು 1199 ಹಿರಿಯ ನಾಗರಿಕರಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries