ನವದೆಹಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ 14 ಜನರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
0
samarasasudhi
ಏಪ್ರಿಲ್ 04, 2024
ನವದೆಹಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ 14 ಜನರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಉಪರಾಷ್ಟ್ರಪತಿ ಜಗದೀಪ ಧನ್‌ಕರ್ ಅವರು ನೂತನ ಸಂಸತ್ ಭವನದಲ್ಲಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಅಜಯ್ ಮಾಕೆನ್, ಬಿಜೆಪಿಯ ಅಶ್ವಿನಿ ವೈಷ್ಣವ್, ಆರ್‌ಪಿಎನ್ ಸಿಂಗ್, ಸಮಿಕ್ ಭಟ್ಟಾಚಾರ್ಯ, ವೈಎಸ್ ಆರ್‌ಪಿಯ ಗೋಲಾ ಬಾಬು ರಾವ್, ಮೇಧಾ ರಘುನಾಥ್ ರೆಡ್ಡಿ, ಸುಬ್ಬಾರೆಡ್ಡಿ ಸೇರಿದಂತೆ ಇತರರು ಪ್ರಮಾಣ ವಚನ ಸ್ವೀಕರಿಸಿದರು.
ಈ ವೇಳೆ ಸದನದಲ್ಲಿ ಬಿಜೆಪಿ ನಾಯಕ ನಾಯಕ ಪಿಯೂಷ್ ಗೋಯಲ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇದ್ದರು.