HEALTH TIPS

ಕೊಯಿಲಾಂಡಿಯಲ್ಲಿ ರೇಬಿಸ್‍ನಿಂದ 4 ಹಸುಗಳು ದುರ್ಮರಣ

              ಕೋಯಿಕ್ಕೋಡ್: ಕೊಯಿಲಾಂಡಿಯಲ್ಲಿ ರೇಬಿಸ್‍ನಿಂದ ನಾಲ್ಕು ಹಸುಗಳು ಸಾವನ್ನಪ್ಪಿರುವ ಘಟನೆ ಕಾಳಿಯಾಟಮುಕ್‍ನ ಪುತೇರಿಪಾರಾ ಪ್ರದೇಶದಲ್ಲಿ ನಡೆದಿದೆ.

                   ಸಂತೋಷ್ ಚೆರುವಾತ್, ಶೋಭಾ ಪಾಲೋಟ್, ಗಿರೀಶ್ ಕುಂಞತ್ ಮತ್ತು ಚಂದ್ರಿಕಾ ಈಸ್ಟ್ ಮುತ್ತುವೋಟ್ ಎಂಬುವವರ ಹಸುಗಳು ನಿನ್ನೆ ಸಾವನ್ನಪ್ಪಿವೆ. ಈ ಪ್ರದೇಶದಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

                     ಕೋಝಿಕ್ಕೋಡ್ ಪಶು ರೋಗ ನಿಯಂತ್ರಣ ಕಚೇರಿ ಹಾಗೂ ಜಿಲ್ಲಾ ಪಶು ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಾಮಾನ್ಯವಾಗಿ ಬೀದಿ ನಾಯಿ ಕಡಿತದಿಂದ ಜಾನುವಾರುಗಳಿಗೆ ಈ ರೋಗ ಹರಡುತ್ತದೆ.

                 ಈ ಹಿನ್ನೆಲೆಯಲ್ಲಿ ಹಸುಗಳನ್ನು ಬಯಲು ಪ್ರದೇಶದಲ್ಲಿ ಕಟ್ಟದಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಹಸುಗಳೊಂದಿಗೆ ನೇರ ಸಂಪರ್ಕ ಹೊಂದಿರುವವರಿಗೆ ತಡೆಗಟ್ಟುವ ಲಸಿಕೆ ಹಾಕುವಂತೆ ಸೂಚಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries