HEALTH TIPS

ಲೋಕಸಭೆ ಚುನಾವಣೆ: ಸಂಜೆ 5 ಗಂಟೆವರೆಗೆ ಶೇ 59ರಷ್ಟು ಮತದಾನ

  ನವದೆಹಲಿ:ಬಿಹಾರದಲ್ಲಿ ಸಂಜೆ 5 ಗಂಟೆವರೆಗೆ ಶೇ 44.3ರಷ್ಟು ಮತದಾನವಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದಲ್ಲಿ ಕಡಿಮೆ ಮತದಾನವಾಗಿದೆ.


ದೇಶದಾದ್ಯಂತ ಸಂಜೆ 5 ಗಂಟೆವರೆಗೆ ಶೇ 59ರಷ್ಟು ಮತದಾನ

ಮಧ್ಯಾಹ್ನ 3 ಗಂಟೆ ಹೊತ್ತಿಗೆ ತಮಿಳುನಾಡಿನಲ್ಲಿ ಶೇ 51.41ರಷ್ಟು ಮತದಾನ

ಮಧ್ಯಾಹ್ನ 3 ಗಂಟೆ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಶೇ. 49.78ರಷ್ಟು ಮತದಾನ

ಮಧ್ಯಾಹ್ನ 3 ಗಂಟೆ ಹೊತ್ತಿಗೆ ತ್ರಿಪುರಾದಲ್ಲಿ ಶೇ 68.35ರಷ್ಟು ಮತದಾನ

LS polls | ಚುನಾವಣಾ ಅಕ್ರಮ ಆರೋಪ: ಇಂಫಾಲ್‌ನ 5 ಬೂತ್‌ಗಳಲ್ಲಿ ಮತದಾನ ಸ್ಥಗಿತ

Photos | ಲೋಕಸಭೆ ಚುನಾವಣೆ 2024: ಸಾಮಾನ್ಯರೂ ಸೇರಿ ಪ್ರಮುಖ ನಾಯಕರಿಂದ ಮತದಾನ

ಮಧ್ಯಾಹ್ನ 1 ಗಂಟೆವರೆಗೂ ಸುಮಾರು ಶೇ.32ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಅಂದಾಜಿಸಿದ್ದಾರೆ.

11 ಗಂಟೆವರೆಗೂ ಪಶ್ಚಿಮ ಬಂಗಾಳದಲ್ಲಿ ಶೇ 33.56, ತ್ರಿಪುರಾದಲ್ಲಿ ಶೇ 34.54 ರಷ್ಟು ಮತದಾನ

ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ನಡೆಯುತ್ತಿರುವ ಮತದಾನದಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ.21 ರಷ್ಟು ಮತದಾನವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈಶಾ ಪೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌, ನಟರಾದ ಕಮಲ ಹಾಸನ್‌, ಅಜಿತ್‌ ಕುಮಾರ್‌, ಕೇಂದ್ರ ಸಚಿವ ಗಡ್ಕರಿ, ಸಚಿವ ರಾಜವರ್ಧನ ರಾಥೋಡ್‌, ಉತ್ತರಾಖಂಡ್‌ ಸಿಎಂ ಪುಷ್ಕರ್‌ ಸಿಂಗ್‌, ಮಣಿಪುರ ಸಚಿವ ಬಿರೇನ್‌ ಸಿಂಗ್‌ ಸೇರಿದಂತೆ ಹಲವರು ಮತದಾನ ಮಾಡಿದರು.

ಲೋಕಸಭೆ ಚುನಾವಣೆ: ವಿಶೇಷ ಡೂಡಲ್ ಮೂಲಕ ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸಿದ ಗೂಗಲ್‌

LS polls 2024: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಮನವಿ

ಅರುಣಾಚಲ ಪ್ರದೇಶದ 2, ಬಿಹಾರದ 4, ಅಸ್ಸಾಂನ 4, ಛತ್ತೀಸ್‌ಗಡದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ 2, ಮೇಘಾಲಯದ 2, ಮಿಜೋರಾಂದ 1, ನಾಗಾಲ್ಯಾಂಡ್‌ನ 1, ರಾಜಸ್ಥಾನದ 12, ಸಿಕ್ಕಿಂನ 1, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡದ 5, ಪಶ್ಚಿಮ ಬಂಗಾಳದ 3, ತಮಿಳುನಾಡಿನ 39 ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದ 1, ಲಕ್ಷದ್ವೀಪದ 1 ಹಾಗೂ ಪುದುಚೇರಿಯ 1 ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ.

ನಾಗಪುರದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮಧ್ಯಪ್ರದೇಶದಲ್ಲಿ ಮಾಜಿ ಸಿಎಂ ಕಮಲ್‌ ನಾಥ್‌, ಅವರ ಪುತ್ರ ನಕುಲ್‌ ನಾಥ್‌, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಮತದಾನ ಮಾಡಿದರು.

ಮೊದಲ ಹಂತದ ಮತದಾನದಲ್ಲಿ 102 ಸ್ಥಾನಗಳಲ್ಲಿ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1491 ಪುರುಷ ಅಭ್ಯರ್ಥಿಗಳಾಗಿದ್ದಾರೆ.

ಬಿಎಸ್‌ಪಿಯಿಂದ 86, ಬಿಜೆಪಿಯಿಂದ 77, ಕಾಂಗ್ರೆಸ್‌ನಿಂದ 56, ಎಐಎಡಿಎಂಕೆಯಿಂದ 36, ಡಿಎಂಕೆಯಿಂದ 5, ಆರ್‌ಜೆಡಿಯಿಂದ 4, ಎಸ್‌ಪಿಯಿಂದ 7, ಆರ್‌ಎಲ್‌ಡಿಯಿಂದ 1, ಎಲ್‌ಜೆಪಿ (ಆರ್) ಮತ್ತು ಜಿತನ್ ರಾಮ್ ಮಾಂಝಿ ಅವರ ಪಕ್ಷದ 1 ಅಭ್ಯರ್ಥಿ ಕಣದಲ್ಲಿದ್ದಾರೆ

ಲೋಕಸಭೆಯ 102 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. 21 ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ.

ತಮಿಳುನಾಡಿನಲ್ಲಿ ನಟ ರಜನಿಕಾಂತ್‌, ಬಿಜೆಪಿ ಮುಖಂಡ ಅಣ್ಣಾಮಲ್ಲೈ, ಕಾಂಗ್ರೆಸ್‌ ನಾಯಕ ಚಿದಂಬಂರಂ ಸೇರಿದಂತೆ ಹಲವಾರು ಗಣ್ಯರು ಮತದಾನ ಮಾಡಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಕೆ ಪಳನಿಸ್ವಾಮಿ ಸೇಲಂನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ. ಈ ಕ್ಷೇತ್ರಗಳಿಂದ ಅದೃಷ್ಟ ಪರೀಕ್ಷೆಗೆ ಇಳಿದವರಲ್ಲಿ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲೆ ಕೂಡ ಇದ್ದಾರೆ. ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಲಿದ್ದು, ಸಂಜೆ 6ಕ್ಕೆ  ಮುಕ್ತಾಯವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries