ನವದೆಹಲಿ: ಪಠ್ಯ ಪುಸ್ತಕಗಳನ್ನು ಪರಿಶೀಲಿಸುವಂತೆ ಮತ್ತು ಪ್ರತಿ ವರ್ಷ ಅವುಗಳನ್ನು ಪರಿಷ್ಕರಿಸುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಶಿಕ್ಷಣ ಸಚಿವಾಲಯ ತಿಳಿಸಿದೆ.
0
samarasasudhi
ಏಪ್ರಿಲ್ 30, 2024
ನವದೆಹಲಿ: ಪಠ್ಯ ಪುಸ್ತಕಗಳನ್ನು ಪರಿಶೀಲಿಸುವಂತೆ ಮತ್ತು ಪ್ರತಿ ವರ್ಷ ಅವುಗಳನ್ನು ಪರಿಷ್ಕರಿಸುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಶಿಕ್ಷಣ ಸಚಿವಾಲಯ ತಿಳಿಸಿದೆ.
ಒಂದು ಬಾರಿ ಮುದ್ರಣವಾದ ಪಠ್ಯಪುಸ್ತಕಗಳನ್ನು ಹಲವು ವರ್ಷ ಉಳಿಸಿಕೊಳ್ಳಬಾರದು.
'ಪ್ರತಿ ವರ್ಷ ಮುದ್ರಣಕ್ಕೆ ಕಳುಹಿಸುವ ಮೊದಲು ಪಠ್ಯಪುಸ್ತಕಗಳನ್ನು ಪರಿಶೀಲಿಸಬೇಕು. ಬದಲಾವಣೆಗಳಿದ್ದರೆ ಸರಿಪಡಿಸಬೇಕು ಅಥವಾ ಹೊಸ ಅಂಶಗಳನ್ನು ಅಗತ್ಯವಿದ್ದರೆ ಸೇರಿಸಬೇಕು' ಎಂದು ತಿಳಿಸಿವೆ.
ಎನ್‌ಸಿಇಆರ್‌ಟಿ ಸದ್ಯ ನೂತನ ಪಠ್ಯಕ್ರಮ ಚೌಕಟ್ಟಿನ ಅನುಸಾರ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಈ ಪುಸ್ತಕಗಳು 2026ರ ವೇಳೆಗೆ ಎಲ್ಲ ತರಗತಿಗಳಿಗೆ ಲಭ್ಯವಾಗಲಿವೆ ಎಂದು ತಿಳಿಸಿವೆ.
ಪ್ರಸಕ್ತ ವರ್ಷ ಮೂರು ಮತ್ತು ಆರನೇ ತರಗತಿಗಳಿಗೆ ನೂತನ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ.