ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಸಂಜೆ ಹಠಾತ್ ಆಗಿ ಹವಾಮಾನ ಬದಲಾವಣೆಯಾಗಿದೆ. ಇಡೀ ದಿನ ಅಧಿಕ ತಾಪಮಾನವಿದ್ದು, ಸಂಜೆ ಭಾರಿ ಗಾಳಿ ಬೀಸಿದೆ. ಜೊತೆಗೆ ಕೆಲ ಭಾಗಗಳಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
0
samarasasudhi
ಏಪ್ರಿಲ್ 24, 2024
ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಸಂಜೆ ಹಠಾತ್ ಆಗಿ ಹವಾಮಾನ ಬದಲಾವಣೆಯಾಗಿದೆ. ಇಡೀ ದಿನ ಅಧಿಕ ತಾಪಮಾನವಿದ್ದು, ಸಂಜೆ ಭಾರಿ ಗಾಳಿ ಬೀಸಿದೆ. ಜೊತೆಗೆ ಕೆಲ ಭಾಗಗಳಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೊದಲಿಗೆ ದೂಳು ಸಹಿತ ಭಾರಿ ಗಾಳಿ ಎದ್ದಿತ್ತು. ಬಳಿಕ ಗುಡುಗು ಸಹಿತ ಮಳೆ ಬಂದಿದೆ. ಮಳೆ ಸುರಿವಾಗಲೂ ಭಾರಿ ಗಾಳಿ ಬೀಸಿದೆ ಎಂದು ಇಲಾಖೆ ಹೇಳಿದೆ.