HEALTH TIPS

ದೂರದರ್ಶನದ ಬಳಿಕ ಇದೀಗ ಚರ್ಚ್ ನಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ!

ತಿರುವನಂತಪುರ: ಕೇರಳದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ 'ದಿ ಕೇರಳ ಸ್ಟೋರಿ' ಪ್ರದರ್ಶನ ವಿಚಾರ ಇದೀಗ ಮತ್ತೊಂದು ತಿರುವುಪಡೆದುಕೊಂಡಿದ್ದು, ದೂರದರ್ಶನದಲ್ಲಿ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಕೇರಳದ ಮೂರು ಚರ್ಚ್ ಗಳು ಚಿತ್ರ ಪ್ರದರ್ಶನ ಮಾಡುತ್ತಿವೆ.

ಹೌದು.. ದೂರದರ್ಶನದಲ್ಲಿ “ದ ಕೇರಳ ಸ್ಟೋರಿ’ ಸಿನೆಮಾ ಪ್ರಸಾರ ಕುರಿತು ಪರ-ವಿರೋಧ ಚರ್ಚೆಗಳು ನಡೆದ ಬೆನ್ನಲ್ಲೇ ಕೇರಳದ ಕ್ಯಾಥಲಿಕ್‌ ಡಯೋಸಿಸ್‌ ಚರ್ಚ್‌ವೊಂದು ವಿದ್ಯಾರ್ಥಿಗಳಿಗಾಗಿ ಇದೇ ಸಿನೆಮಾ ಪ್ರದರ್ಶನ ಏರ್ಪಡಿಸಿದೆ.

ಮೂಲಗಳ ಪ್ರಕಾರ “ಹದಿಹರೆಯದವರಿಗೆ ತರಬೇತಿ’ ಎಂಬ ಹೆಸರಿನಲ್ಲಿ ಸೈರೋ ಮಲಬಾರ್‌ ಕ್ಯಾಥೊಲಿಕ್‌ ಚರ್ಚ್‌ನ ಇಡುಕ್ಕಿ ಡಯಾ ಸಿಸ್‌ನಲ್ಲಿ ಕೇರಳ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (Kerala Catholic Youth Movement-KCYM) ವತಿಯಿಂದ ಸಿನೆಮಾ ಪ್ರದರ್ಶಿಸಲಾಗುತ್ತಿದೆ. 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿನೆಮಾ ತೋರಿಸಿದ ಬಳಿಕ, ಚಿತ್ರದ ಬಗ್ಗೆ ವಿಮರ್ಶಾತ್ಮಕ ಲೇಖನ ಬರೆಯುವಂತೆ ಸೂಚಿಸಲಾಗಿದೆ. ಜತೆಗೆ ತಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಚರ್ಚಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಯಾ ಸಿಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಫಾ| ಜಿನ್ಸ್‌ ಕಾರಕ್ಕಟ್‌, ಪ್ರೀತಿ ಮತ್ತು ಅದರಿಂದ ಉಂಟಾಗುವ ಅಪಾಯಗಳ ಬಗ್ಗೆ ಮನವರಿಕೆ ಮಾಡಲು ಸಿನೆಮಾ ಪ್ರದರ್ಶಿಸಲಾಗಿತ್ತು ಎಂದಿದ್ದಾರೆ.

ತಾಮರಸ್ಸೆರಿ, ತಲಶ್ಶೇರಿ ಮತ್ತು ಪಾಲಾ ಕೆಸಿವೈಎಂ ಘಟಕಗಳು ಏಪ್ರಿಲ್ 13 ರಿಂದ ಚಲನಚಿತ್ರವನ್ನು ಪ್ರದರ್ಶಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು KCYM ತಾಮರಸ್ಸೆರಿ ಅಧ್ಯಕ್ಷ ರಿಚಾಲ್ಡ್ ಜಾನ್ ಹೇಳಿದ್ದಾರೆ.

ಬಿಜೆಪಿ ಬೆಂಬಲ

ಇನ್ನು ಚರ್ಚ್ ನಲ್ಲಿ ಚಿತ್ರ ಪ್ರದರ್ಶನ ಮಾಡಿದ್ದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌ ಬೆಂಬಲಿಸಿದ್ದು, 'ಕೇರಳದ ಪ್ರತೀ ಜಿಲ್ಲೆಯಲ್ಲೂ ಲವ್‌ ಜೆಹಾದ್‌ ಸಮಸ್ಯೆಯಿದೆ. ರಾಜ್ಯದಲ್ಲಿ ನೂರಕ್ಕೂ ಅಧಿಕ ಮಂದಿ ಲವ್‌ ಜಿಹಾದ್‌ ಸಂತ್ರಸ್ತರಿದ್ದಾರೆ’ ಎಂದು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries