HEALTH TIPS

ನಾಳೆಯಿಂದ ಚೆರ್ಕಳ ಪಾಡಿ ಮೇಲಿನಮನೆ ಕಾಮಲೋನ್ ತರವಾಡು ದೈವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ

          ಕಾಸರಗೋಡು: ಚೆಂಗಳ ಸನಿಹದ  ಪಾಡಿ ಮೇಲಿನಮನೆ ಕಾಮಲೋನ್ ತರವಾಡು ದೈವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏ. 21ರಿಂದ 26ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ಇರುವೈಲ್ ಕೇಶವತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ಇರುವೈಲ್ ಪದ್ಮನಾಭ ತಂತ್ರಿಗಳು ಮತ್ತು ಬ್ರಹ್ಮಶ್ರೀ ಇರುವೈಲ್ ಕೃಷ್ಣದಾಸ್ ತಂತ್ರಿಗಳು ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಿಕೊಡಲಿರುವುದಾಗಿ ದೈವಸ್ಥಾನ ಸಮಿತಿ ಅಧ್ಯಕ್ಷ ಕೆ. ದಾಮೋದರನ್ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

            21ರಂದು ಬೆಳಗ್ಗೆ 10ಕ್ಕೆ ಬೆಳ್ಳೂರು ಶ್ರೀ ಮಹಾವಿಷ್ಣು ಸನ್ನಿಧಿಯಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ದೈವಸ್ಥಾನಕ್ಕೆ ಬರಲಿದೆ. 10.30ಕ್ಕೆ ಗ್ರಂಥ ಪಾರಾಯಣ, ಸಂಜೆ 4ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ವಿವಿಧ ತಾಂತ್ರಿಕ ಕ್ರಿಯೆ, ರಾತ್ರಿ 8ಕ್ಕೆ ತಿರುವಾದಿರ, ಕೈಕೊಟ್ಟುಕಳಿ, ಕೂಚುಪುಡಿ ನೃತ್ಯ ನಡೆಯುವುದು. 22ರಂದು  ಬೆಳಗ್ಗೆ 9ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ನಂತರ ದೇವಸ್ಥಾನಕ್ಕಾಗಿ ಯು.ಎ.ಇ ಸಮಿತಿ ವತಿಯಿಂದ ನಿರ್ಮಿಸಲಾದ ಗೋಪುರ ಮತ್ತು ಸಿ.ಆರ್ ಗಂಗಾಧರನ್ ನಾಯರ್ ಚುಕ್ಕಿನಡ್ಕ ನಿರ್ಮಿಸಿಕೊಟ್ಟಿರುವ  ಅಂಗಣ ಶಾಶ್ವತ ಚಪ್ಪರವನ್ನು ಎಡನೀರುಶ್ರೀಗಳು ಲೋಕಾರ್ಪಣೆಗೈಯುವರು.  ಬ್ರಹ್ಮಶ್ರೀ ಇರುವ್ಯಲ್ ಕೇಶವ ತಂತ್ರಿ ಉಪಸ್ಥಿತರಿರುವರು. 10ಕ್ಕೆ ಲಲಿತಾಸಹಸ್ರನಾಮ, ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮ ಜರುಗುವುದು.

          23ರಂದು ಬೆಳಗ್ಗೆ ಗಣಪತಿ ಹೋಮ, ಬಿಂಬಶುದ್ಧಿ, ಕಲಶಾಭಿಷೇಕ, ಸಂಜೆ 4ಕ್ಕೆ ಸಾಂಸ್ಕøತಿಕ ಸಮ್ಮೇಳನದ ಉದ್ಘಾಟನೆ ನಡೆಯುವುದು. 24ರಂದು ಮಧ್ಯಾಹ್ನ 12.03ರಿಂದ 1.28ರ ಮುಹೂರ್ತದಲ್ಲಿ ಚಿತ್ರಕೂಟ ಪ್ರತಿಷ್ಠೆ, ಕಲಶಾಭಿಷೇಕ, 3.30ಕ್ಕೆ ಸರ್ವೈಶ್ವರ್ಯ ದೀಪ ಪೂಜೆ, ನಡೆಯುವುದು. 25ರಂದು ವಿವಿಧ ವೈದಿಕ ಕಾರ್ಯಕ್ರಮ. 26ರಂದು ಬೆಳಗ್ಗೆ 11.33ರಿಂದ 1.26ರ  ಮಧ್ಯೆ ಪ್ರತಿಷ್ಠಾ ಕಾರ್ಯಗಳು ನೆರವೇರಲಿದೆ ಎಂದು ತಿಳಿಸಿದರು. 

         ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳಾದ ಬಾಲಕೃಷ್ಣನ್ ನಾಯರ್ ಪೊಯಿನಾಚಿ, ಕೆ. ಕುಞÂಕೃಷ್ಣನ್ ನಾಯರ್ ಕಾಟುಕೊಚ್ಚಿ, ಕೆ.ಎಚ್ ವಿಜಯನ್ ಪುಂಡೂರು, ದಿವಾಕರನ್ ಪಾಡಿ, ರಾಜನ್ ಚೆಮ್ನಾಡ್, ಬೇಬಿ ಚುಳ್ಳಿಕರ, ವೇಣುಗೋಪಾಲ್ ಉಪಸ್ಥಿತರಿದ್ದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries