HEALTH TIPS

ಕ್ರಿಶ್ಚಿಯನ್‌ ಧರ್ಮಪ್ರಾಂತ್ಯದಿಂದ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನ

            ತಿರುವನಂತಪುರ: ಕೇರಳದ ಕ್ರಿಶ್ಚಿಯನ್‌ ಧರ್ಮಪ್ರಾಂತ್ಯವೊಂದು 'ಕಠಿಣ ತರಬೇತಿ ಕಾರ್ಯಕ್ರಮ'ದ ಭಾಗವಾಗಿ 10, 11 ಮತ್ತು 12ನೇ ತರಗತಿ ಮಕ್ಕಳಿಗೆ ಬಾಲಿವುಡ್‌ನ 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ಪ್ರದರ್ಶಿಸಿದೆ.

          ದೂರದರ್ಶನದಲ್ಲಿ ಈ ಚಿತ್ರವನ್ನು ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಸಿರೋ ಮಲಬಾರ್‌ ಕ್ಯಾಥೋಲಿಕ್‌ ಚರ್ಚ್‌ ಅಡಿಯಲ್ಲಿ ಇಡುಕ್ಕಿಯ ಕ್ಯಾಥೋಲಿಕ್ ಧರ್ಮಪ್ರಾಂತ್ಯ ಕಳೆದ ವಾರ ಚಿತ್ರವನ್ನು ಪ್ರದರ್ಶಿಸಿ, ಅದರ ಬಗ್ಗೆ ವಿಮರ್ಶೆ ಬರೆಯುವಂತೆ ಹೇಳಿದೆ.

            ಸೋಮವಾರ ಈ ಬಗ್ಗೆ ವಿವರಣೆ ನೀಡಿರುವ ಇಡುಕ್ಕಿಯ ಕ್ಯಾಥೋಲಿಕ್‌ ಧರ್ಮಪ್ರಾಂತ್ಯ, 'ಪ್ರೀತಿಯ ಕುರಿತು ಮತ್ತು ಅದರಿಂದಾಗುವ ಪರಿಣಾಮಗಳು ಹಾಗೂ ಎದುರಾಗುವ ಅಪಾಯಗಳ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು' ಚಿತ್ರವನ್ನು ಪ್ರದರ್ಶಿಲಾಯಿತು ಎಂದು ಹೇಳಿದೆ.


              'ಪ್ರತಿ ವರ್ಷವೂ ರಜಾ ಅವಧಿಯಲ್ಲಿ ಮಕ್ಕಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ಈ ಕಾರ್ಯಕ್ರಮಕ್ಕಾಗಿ ನಿರ್ದಿಷ್ಟ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಪುಸ್ತಕವನ್ನು ಸಿದ್ಧಪಡಿಸುತ್ತೇವೆ' ಎಂದು ಧರ್ಮಪ್ರಾಂತ್ಯದ ಮಾಧ್ಯಮ ಉಸ್ತುವಾರಿ ಫಾದರ್ ಜಿನ್ಸ್‌ ಕಾರಕ್ಕಟ್‌ ತಿಳಿಸಿದ್ದಾರೆ.


                 -, ಧರ್ಮಪ್ರಾಂತ್ಯದ ಮಾಧ್ಯಮ ಉಸ್ತುವಾರಿಚಿತ್ರದ ಸುತ್ತ ಹುಟ್ಟಿಕೊಂಡಿರುವ ವಿವಾದಗಳ ಬಗ್ಗೆ ನನಗೆ ಗೊತ್ತಿಲ್ಲ. ಅದು ಒಟಿಟಿಯಲ್ಲಿ ಬಿಡುಗಡೆಯಾಗಿದೆ ಎಂಬುದು ಮಾತ್ರ ಗೊತ್ತು.
                                  - ಫಾದರ್ ಜಿನ್ಸ್‌ ಕಾರಕ್ಕಟ್‌

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries