HEALTH TIPS

ಆಲ್ ಪಾಸ್ ಇಲ್ಲ: ಡಿ,ಇ ಗ್ರೇಡ್ ಪಡೆದವರು ಪರೀಕ್ಷೆ ಬರೆದು ಹತ್ತನೇ ತರಗತಿಗೆ

                  ತಿರುವನಂತಪುರಂ:  ಕೇರಳದ ಸಾರ್ವಜನಿಕ ಶಾಲೆಗಳಲ್ಲಿ(ಸರ್ಕಾರಿ-ಅನುದಾನಿತ) ಒಂಬತ್ತನೇ ತರಗತಿಯ ಎಲ್ಲರನ್ನೂ ಉತ್ತೀರ್ಣಗೊಳಿಸದಿರಲು ತೀರ್ಮಾನಿಸಲಾಗಿದೆ.  ಡಿ ಮತ್ತು ಇ ನಂತಹ ಕಡಮೆ ಶ್ರೇಣಿಗಳನ್ನು(ಗ್ರೇಡ್) ಪಡೆದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

                ಈ ರಜೆಯಲ್ಲಿ ಅವರಿಗೆ ಅಗತ್ಯವಿರುವ ಅಧ್ಯಯನ ಬೆಂಬಲವನ್ನು ನೀಡಿ ಅವರು ಎಸ್‍ಇ(ಸೇವ್ ದಿ ಇಯರ್) ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರವೇ ಅವರನ್ನು 10 ನೇ ತರಗತಿಗೆ ಉತ್ತೀರ್ಣಗೊಳಿಸಲಾಗುತ್ತದೆ. ಈ ವರ್ಷ ಒಂಬತ್ತನೇ ತರಗತಿಗೆ ಮಾತ್ರ, ಈ ಕ್ರಮ ಅನುಸರಿಸುವುದಾದರೆ ಮುಂದಿನ ವಷರ್Àದಿಂದ ಇತರ ಎಲ್ಲಾ ತರಗತಿಗಳಿಗೂ ಈ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಲಾಗಿದೆ. ಎಸ್‍ಸಿಇಆರ್‍ಟಿಯ ಮಾರ್ಗಸೂಚಿಗಳ ಪ್ರಕಾರ ಎಸ್‍ಇ ಪರೀಕ್ಷೆಯನ್ನು ನಡೆಸಲಾಗುತ್ತದೆ, 10 ನೇ ತರಗತಿಗೆ ಪ್ರವೇಶಿಸುವ ಮೊದಲು ಮಕ್ಕಳು ಸಾಮಾನ್ಯ ಗುಣಮಟ್ಟವನ್ನು ಪೂರೈಸಬೇಕು. ಎಸ್‍ಇ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಶಾಲಾ ಹಂತದಲ್ಲಿಯೇ ತಯಾರಿಸಲಾಗುತ್ತದೆ. ಪ್ರಸ್ತುತ ವಾರ್ಷಿಕ ಪರೀಕ್ಷೆ ಬರೆದ 8ನೇ ತರಗತಿವರೆಗಿನ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಸಹಜವಾಗಿ ಬಡ್ತಿ ಪಡೆಯುತ್ತಿದ್ದಾರೆ. ಆದರೆ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರನ್ನು ಎಸ್ ಇ ಪರೀಕ್ಷೆ ನಡೆಸಿ ಮುಂದಿನ ತರಗತಿಗೆ ಭಡ್ತಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ. ಕೆಲವು ಶಿಕ್ಷಕರ ಸಂಘಗಳು ಸರ್ಕಾರದ ಅಧ್ಯಯನ ಬೆಂಬಲ ಯೋಜನೆ ಅನುಷ್ಠಾನದ ವಿರುದ್ಧ ಪ್ರತಿಭಟನೆಗಳನ್ನು ಎತ್ತಿದರೂ, ಸರ್ಕಾರವು ಮುಂದುವರಿಯುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries