HEALTH TIPS

ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

 ಬಾಲೇಶ್ವರ: 'ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿ'ಯ(ಐಟಿಸಿಎಂ) ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಕರಾವಳಿಯಲ್ಲಿ ಗುರುವಾರ ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಗುರುವಾರ ತಿಳಿಸಿದೆ.

'ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ನಿರೀಕ್ಷೆಯಂತೆ, ಕ್ಷಿಪಣಿಯ ಎಲ್ಲ ವ್ಯವಸ್ಥೆಗಳ ಕಾರ್ಯವು ಸಮರ್ಪಕವಾಗಿ ಇರುವುದು ಕಂಡುಬಂತು' ಎಂದು ತಿಳಿಸಿದೆ.

'ಬೆಂಗಳೂರು ಮೂಲದ ಗ್ಯಾಸ್‌ ಟರ್ಬೈನ್ ರಿಸರ್ಚ್‌ ಎಸ್ಟಾಬ್ಲಿಷ್‌ಮೆಂಟ್‌(ಜಿಟಿಆರ್‌ಇ) ಅಭಿವೃದ್ಧಿಪಡಿಸಿರುವ ಪ್ರೊಪಲ್ಷನ್ ವ್ಯವಸ್ಥೆಯನ್ನು ಈ ಕ್ಷಿಪಣಿಯಲ್ಲಿ ಅಳವಡಿಸಲಾಗಿದೆ. ಪ್ರೊಪಲ್ಷನ್‌ ವ್ಯವಸ್ಥೆಯ ಕಾರ್ಯವನ್ನು ಸಹ ಈ ಪರೀಕ್ಷೆ ದೃಢೀಕರಿಸಿದೆ' ಎಂದು ಡಿಆರ್‌ಡಿಒ ತಿಳಿಸಿದೆ.

ಇಡೀ ಕ್ಷಿಪಣಿ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಅಂಗಸಂಸ್ಥೆಯಾದ ಏರೋನಾಟಿಕಲ್ ಡೆವಲೆಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ಎಡಿಇ) ಅಭಿವೃದ್ಧಿಪಡಿಸಿದೆ. ಇತರ ಪ್ರಯೋಗಾಲಯಗಳು ಮತ್ತು ಉದ್ದಿಮೆಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಿವೆ.

'ರಾಡಾರ್‌, ಇಒಟಿಎಸ್‌ ಹಾಗೂ ಟೆಲಿಮೆಟ್ರಿಯಂತಹ ಸಂವೇದಕಗಳ ಮೂಲಕ ಈ ಕ್ಷಿಪಣಿ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸಲಾಗಿತ್ತು. ಈ ಸಂವೇದಕಗಳಲ್ಲದೇ, ಸುಖೋಯ್‌-30-ಎಂಕೆಐ ಯುದ್ಧವಿಮಾನದ ಮೂಲಕವೂ ಮೇಲ್ವಿಚಾರಣೆ ನಡೆಸಲಾಯಿತು' ಎಂದು ತಿಳಿಸಿದೆ.

ರಾಜನಾಥ್‌ ಸಿಂಗ್‌ ಅಭಿನಂದನೆ: ಐಟಿಸಿಎಂಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಡಿಆರ್‌ಡಿಒ ಅನ್ನು ಅಭಿನಂದಿಸಿದ್ದಾರೆ

'ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿ'(ಐಟಿಸಿಎಂ)ಯ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಡಿಆರ್‌ಡಿಒ ಗುರುವಾರ ಯಶಸ್ವಿಯಾಗಿ ನೆರವೇರಿಸಿತು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries