HEALTH TIPS

ಐದು ಮತಗಟ್ಟೆಗಳು ಮಹಿಳಾ ಸಿಬ್ಬಂದಿ ನಿರ್ವಹಿಸುವ 'ಪಿಂಕ್ ಬೂತ್'

        ಕಾಸರಗೋಡು: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಮಹಿಳಾ ಸಿಬ್ಬಂದಿ ನಿಯಂತ್ರಿಸುವ ಐದು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 

         ಮಂಜೇಶ್ವರ ಮಂಡಲದಲ್ಲಿ 150ನೇ ಬೂತ್ ಸಂಖ್ಯೆ ಕುಂಬಳೆಯ ಹೋಲಿಫ್ಯಾಮಿಲಿ ಶಾಲೆ, ಕಾಸರಗೋಡು ಮಂಡಲದಲ್ಲಿ 138ನೇ ಸರ್ಕಾರಿ ಕಾಲೇಜು ಮತಗಟ್ಟೆ, ಉದುಮ ಕ್ಷೇತ್ರದಲ್ಲಿ 148ನೇ ಮತಗಟ್ಟೆ ಕುಂಡಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಹೊಸದುರ್ಗ ಕ್ಷೇತ್ರದಲ್ಲಿ 20ನೇ ಮತಗಟ್ಟೆ ವೆಳ್ಳಿಕೋತ್ ಮಹಾಕವಿ ಪಿ. ಸ್ಮಾರಕ ಸರ್ಕರಿ ಶಾಲೆ ಹಾಗೂ ತ್ರಿಕ್ಕರಿಪುರ ಕ್ಷೇತ್ರದಲ್ಲಿ 45ನೇ ಮತಗಟ್ಟೆ ಚೀಮೇನಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ 'ಪಿಂಕ್ ಬೂತ್'ಚಟುವಟಿಕೆ ನಡೆಸಿತ್ತು. 

            ಕಾಸರಗೋಡು ಕೂಡ್ಲು ಶಾಲೆಯಲ್ಲಿ ಹಸಿರು ಸಂಹಿತೆಯೊಂದಿಗೆ ಪಾರಂಪರಿಕ ಶೈಲಿಯಲ್ಲಿ ಮತಗಟ್ಟೆಯನ್ನು ಅಲಂಕರಿಸಲಾಗಿತ್ತು. 

           ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಅವರು ಕಡಂಬಾರು ಶಾಲೆಯಲ್ಲಿ, ಐಕ್ಯರಂಗ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಪಡನ್ನಕ್ಕಾಡ್ ಶಾಲೆಯಲ್ಲಿ, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ನೆಲ್ಲಿಕುಂಜೆ ಬಾಲಕಿಯರ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಉದುಮ ಶಾಸಕ ಸಿ.ಎಚ್. ಕುಞಂಬು ಅವರು ಅಣಂಗೂರಿನ ನಗರಸಭಾ ಸರ್ಕಾರಿ ಎಲ್‍ಪಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

           ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತದಾನ ನಡೆಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries