HEALTH TIPS

ಕಾಸರಗೋಡು ಲೋಕಸಭಶ ಕ್ಷೇತ್ರದಲ್ಲಿ ಸೇವಾ ಅಗತ್ಯ ಅಂಚೆ ಮತ ಪಿವಿಸಿ ಆರಂಭ

              ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸೇವಾ ಅಗತ್ಯ ಮತದಾರರಿಗೆ (ಎವಿಇಎಸ್) ಅಂಚೆ ಮತದಾನ ಭಾನುವಾರ (ಎ.21) ಆರಂಭವಾಗಿದೆ.  ಈಗಾಗಲೇ ಅರ್ಜಿ ಸಲ್ಲಿಸಿದವರು ವಿಧಾನಸಭೆಯ ಕ್ಷೇತ್ರವಾರುಗಳಾಗಿ ಸ್ಥಾಪಿಸಿರುವ ಅಂಚೆ ಮತ ಕೇಂದ್ರಗಳಲ್ಲಿ ಮತದಾನ ಮಾಡಬಹುದು.

             ಚುನಾವಣಾ ಆಯೋಗವು ಅಂಗೀಕರಿಸಿದ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಹೊಂದಿರಬೇಕು. ಮತದಾನ ಕೇಂದ್ರವು ಬೆಳಗ್ಗೆ ಒಂಭತ್ತು ಗಂಟೆಯಿಂದ ಸಂಜೆ ಐದು ಗಂಟೆಯ ವರೆಗೆ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಇಂಬಾಶೇಖರ್ ಮಾಹಿತಿ ನೀಡಿದ್ದಾರೆ.

              ಮಂಜೇಶ್ವರ ಕ್ಷೇತ್ರದ ಜಿಎಚ್‍ಎಸ್‍ಎಸ್ ಕುಂಬಳೆ, ಕಾಸರಗೋಡು ಕ್ಷೇತ್ರದ ಕಾಸರಗೋಡು ಸರ್ಕಾರಿ ಕಾಲೇಜು, ಉದುಮ ಮಂಡಲದ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆ, ಕಾಂಞಂಗಾಡ್ ಕ್ಷೇತ್ರದ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ತಿಕ್ಕರಿಪುರ ಮಂಡಲದ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್, ಪಯ್ಯನ್ನೂರು ಕ್ಷೇತ್ರದ ಎ.ಕುಂಞÂರಾಮನ್ ಆದಿಯೋಡಿ ಸ್ಮಾರಕ ಜಿವಿಎಚ್‍ಎಸ್ ಪಯ್ಯನ್ನೂರು, ಕಲ್ಯಾಶ್ಶೇರಿ ಮಂಡಲದ ಕೆಪಿಆರ್ ಮೆಮೋರಿಯಲ್ ಎಚ್‍ಎಸ್‍ಎಸ್ ಕಲ್ಯಾಶ್ಶೇರಿ ಎಂಬಿವುಗಳು ಮತದಾನ ಕೇಂದ್ರಗಳಾಗಿವೆ. ಸತತ ಮೂರು ದಿನಗಳ ಕಾಲ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಮೂರು ದಿನಗಳಲ್ಲಿ ಅರ್ಜಿ ಸಲ್ಲಿಸಿದ ಮತದಾರರು ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬಹುದು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries