ತಿರುವನಂತಪುರ: ಡಾ. ಶಹನಾ ಆತ್ಮಹತ್ಯೆ ಪ್ರಕರಣದ ಆರೋಪಿ ಡಾ. ರುವೈಸ್ ಗೆ ಮತ್ತೆ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಪಿಜಿ ಉನ್ನತ ವ್ಯಾಸಂಗಕ್ಕೆ ಅನುಮತಿ ನೀಡಲಾಗಿದೆ. ಹೈಕೋರ್ಟ್‍ನ ಏಕ ಪೀಠದ ಮಧ್ಯಂತರ ಆದೇಶದ ಮೂಲಕ ಅನುಮತಿ ನೀಡಲಾಗಿದೆ.
ತರಗತಿಗೆ ಹಾಜರಾಗಲು ಮಾತ್ರ ಅನುಮತಿ ನೀಡಲಾಗಿದೆ. ಶಿಸ್ತು ಕ್ರಮವನ್ನು ಎತ್ತಿ ಹಿಡಿದರೂ ಹಾಜರಾತಿಯನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಶಿಸ್ತು ಕ್ರಮವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸಲ್ಲಿಸಿರುವ ಅರ್ಜಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ವೈದ್ಯ ರುವೈಸ್ ಕೊನೆಯ ಕ್ಷಣದಲ್ಲಿ ಶಹನಾ ಮದುವೆಯಿಂದ ಹಿಂದೆ ಸರಿದಿದ್ದÀರು. ರುವೈಸ್‍ಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಲಾಗಿದ್ದು, ಅದರಲ್ಲಿ ಅವರು ಸಂಬಂಧದಿಂದ ಹಿಂದೆ ಸರಿಯುತ್ತಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಹನಾ ಸೂಚಿಸಿದ್ದರು. ಆದರೆ ರುವೈಸ್ ಇದನ್ನು ತಡೆಯಲು ಪ್ರಯತ್ನಿಸಲಿಲ್ಲ. ಮೆಸೇಜ್ ಬಂದ ನಂತರ ರುವೈಸ್ ಶಹನಾ ನಂಬರ್ ಬ್ಲಾಕ್ ಮಾಡಿದ್ದ. ಇದರಿಂದ ಶಹನಾ ಅವರ ನೈತಿಕ ಸ್ಥೈರ್ಯ ಮತ್ತಷ್ಟು ಕುಸಿಯಿತು. ಇದು ಆತ್ಮಹತ್ಯೆಗೈಯ್ಯುವಲ್ಲಿ ಪರ್ಯವಸಾನಗೊಂಡಿತು ಎಂಬುದು ಪೆÇಲೀಸರ ಮೌಲ್ಯಮಾಪನ.
ರುವೈಸ್ ಮತ್ತು ಅವರ ಕುಟುಂಬದವರು ಹೆಚ್ಚಿನ ವರದಕ್ಷಿಣೆ ಸೇರಿದಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರೂ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳಾಗಿದ್ದರು.


