ತ್ರಿಶೂರ್: ಚುನಾವಣಾ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕುನ್ನಂಕುಳಂಗೆ ಇಂದು ಆಗಮಿಸಿದರು.
ಶ್ರೀಕೃಷ್ಣ ಕಾಲೇಜು ಮೈದಾನದಿಂದ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿ ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಂತಿದ್ದ ಜನರತ್ತ ಕೈಬೀಸಿದರು.
ಆಲತ್ತೂರಿನ ಎನ್‍ಡಿಎ ಅಭ್ಯರ್ಥಿ ಟಿ.ಎನ್.ಸರಸು, ತ್ರಿಶೂರ್ ಅಭ್ಯರ್ಥಿ ಸುರೇಶ್ ಗೋಪಿ, ಮಲಪ್ಪುರಂ ಅಭ್ಯರ್ಥಿ ಎಂ.ಅಬ್ದುಲ್ ಸಲಾಂ, ಪೆÇನ್ನಾನಿ ಅಭ್ಯರ್ಥಿ ನಿವೇದಿತಾ ಸುಬ್ರಮಣ್ಯಂ, ಚಾಲಕುಡಿ ಅಭ್ಯರ್ಥಿ ಕೆ. ಎ.ಉಣ್ಣಿಕೃಷ್ಣನ್ ಭಾಗವಹಿಸಿದ್ದರು.
ತೀವ್ರವಾದ ಬಿಸಿಲು ಮತ್ತು ಶಾಖದ ಹೊರತಾಗಿಯೂ,ಪ್ರಧಾನಿಗಳ ಆಗಮನಕ್ಕೆ ಗಂಟೆಗಳ ಮೊದಲೇ ಕಾರ್ಯಕರ್ತರು, ಅಭಿಮಾನಿಗಳು ಬಂದು ಸೇರಿದ್ದರು. ಪ್ರಧಾನಮಂತ್ರಿಯವರ ಆಗಮನದ ಹಿನ್ನೆಲೆಯಲ್ಲಿ ಕುನ್ನಂಕುಳಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಬಹುಸಂಖ್ಯೆಯಲ್ಲಿ ಸೇರಿದ್ದರು.





