ತ್ರಿಶೂರ್: ಚುನಾವಣಾ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳಕ್ಕೆ ಆಗಮಿಸಿದ್ದರು. ಮಲಯಾಳಂನಲ್ಲಿ ಭಾಷಣ ಆರಂಭಿಸಿದ ಅವರು, ಮುಂದಿನ ಅವಧಿಯಲ್ಲಿ ಅಭಿವೃದ್ಧಿ ಮತ್ತು ಸಂಪ್ರದಾಯಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕೇರಳ ಶ್ರೇಷ್ಠ ಸಾಂಸ್ಕøತಿಕ ಕೇಂದ್ರ. ಪಾಲಕ್ಕಾಡ್ ಅನ್ನು ಕೇರಳದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಯಾರ ಮನಸ್ಸಿನ ಮೇಲೂ ಪರಿಣಾಮ ಬೀರದಿರದು. ಮುಂದಿನ ಐದು ವರ್ಷಗಳಲ್ಲಿ ಕೇರಳದ ಈ ಸಂಪ್ರದಾಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರುವುದು ಸರ್ಕಾರದ ಗುರಿ ಎಂದರು.
ಕೇರಳ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಮಥ್ರ್ಯವನ್ನು ಹೊಂದಿದೆ. ಅವುಗಳನ್ನೆಲ್ಲ ಅಭಿವೃದ್ಧಿಪಡಿಸಿ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದರು. ಅತ್ಯುತ್ತಮ ಹೆದ್ದಾರಿಗಳು, ಎಕ್ಸ್‍ಪ್ರೆಸ್‍ವೇಗಳು ಮತ್ತು ಹೈಸ್ಪೀಡ್ ವಂದೇಭಾರತ್ ರೈಲುಗಳ ಜಾಲದ ಮೂಲಕ ಇದನ್ನು ಸಂಪರ್ಕಿಸಲಾಗುತ್ತದೆ.
ನಮ್ಮ ಪ್ರೀತಿಯ ಸುರೇಶ್ ಗೋಪಿಯವರು ಆಗಾಗ ನನ್ನನ್ನು ಭೇಟಿ ಮಾಡಿ ವಂದೇಭಾರತದ ಹೊಸ ಮಾದರಿಗಳ ಬಗ್ಗೆ ಮಾತನಾಡುತ್ತಾರೆ. ಅವರು ಮುಂದಿಟ್ಟಿರುವ ಎಲ್ಲ ಬೇಡಿಕೆಗಳನ್ನು ಸರ್ಕಾರ ಪರಿಹರಿಸಿ ಅನುಷ್ಠಾನಗೊಳಿಸಲಿದೆ ಎಂದು ಪ್ರಧಾನಿ ಭರವಸೆ ನೀಡಿದರು
ಆಲತ್ತೂರಿನ ಎನ್‍ಡಿಎ ಅಭ್ಯರ್ಥಿ ಟಿ.ಎನ್.ಸರಸು, ತ್ರಿಶೂರ್ ಅಭ್ಯರ್ಥಿ ಸುರೇಶ್ ಗೋಪಿ, ಮಲಪ್ಪುರಂ ಅಭ್ಯರ್ಥಿ ಎಂ.ಅಬ್ದುಲ್ ಸಲಾಂ, ಪೆÇನ್ನಾನಿ ಅಭ್ಯರ್ಥಿ ನಿವೇದಿತಾ ಸುಬ್ರಮಣ್ಯಂ, ಚಾಲಕುಡಿ ಅಭ್ಯರ್ಥಿ ಕೆ. ಎ.ಉಣ್ಣಿಕೃಷ್ಣನ್ ಭಾಗವಹಿಸಿದ್ದರು.





