ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಸೌರಮಾನ ಯುಗಾದಿಯ ಹಬ್ಬವನ್ನು ಹೊಸ ವರ್ಷಾಚರಣೆ ವಿಷುಪರ್ವದಂದು ವಿಶೇಷ ಪೂಜಾ ಕೈಂಕರ್ಯದೊಂದಿಗೆ ಶ್ರದ್ಧಾಭಕ್ತಿ ಸಂಭ್ರಮಗಳಿಂದ ನೆರವೇರಿಸಲಾಯಿತು.
ಶ್ರೀ ಕ್ಷೇತ್ರದ ಪವಿತ್ರಪಾಣಿ ಹಾಗೂ ಪ್ರಧಾನ ಅರ್ಚಕ ಎಸ್. ವಾಸುದೇವ ಭಟ್ ಅವರ ನೇತೃತ್ವದಲ್ಲಿ ಅರ್ಚಕ ಶಿವರಾಜ ಪೂಜಾದಿಗಳನ್ನು ನಿರ್ವಹಿಸಿದರು. ಸಾಮೂಹಿಕ ಪಂಚಾಂಗ ಶ್ರವಣ ನಡೆಯಿತು. ಮೇ. 10 ರಂದು ಶುಕ್ರವಾರ ಅಕ್ಷಯ ತೃತೀಯದಂದು ನಡೆಯಲಿರುವ ಶ್ರೀ ಕ್ಷೇತ್ರದ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.






