ಟೊರೊಂಟೊದಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತ್ಯೇಕತಾವಾದಿ ಘೋಷಣೆಗಳು ಮೊಳಗಿದ ಹಿನ್ನೆಲೆಯಲ್ಲಿ ಭಾರತವು ಸೋಮವಾರ ಕೆನಡಾದ ಉಪ ರಾಯಭಾರಿಯನ್ನು ಕರೆಸಿಕೊಂಡು ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತು.
0
samarasasudhi
ಏಪ್ರಿಲ್ 30, 2024
ಟೊರೊಂಟೊದಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತ್ಯೇಕತಾವಾದಿ ಘೋಷಣೆಗಳು ಮೊಳಗಿದ ಹಿನ್ನೆಲೆಯಲ್ಲಿ ಭಾರತವು ಸೋಮವಾರ ಕೆನಡಾದ ಉಪ ರಾಯಭಾರಿಯನ್ನು ಕರೆಸಿಕೊಂಡು ತನ್ನ ತೀವ್ರ ಪ್ರತಿಭಟನೆಯನ್ನು ದಾಖಲಿಸಿತು.
ರವಿವಾರ ಖಾಲ್ಸಾ ದಿನದ ಪ್ರಯುಕ್ತ ಟ್ರುಡೊ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದ್ದ ಖಾಲ್ಸಾ ಪರೇಡ್ ಸಂದರ್ಭದಲ್ಲಿ ಖಾಲಿಸ್ತಾನ್ ಪರ ಘೋಷಣೆಗಳು ಮೊಳಗಿದ್ದವು.
ಕೆನಡಾದ ಪ್ರಧಾನಿಗಳು ಭಾಷಣ ಮಾಡಿದ್ದ ಕಾರ್ಯಕ್ರಮದಲ್ಲಿ ಖಲಿಸ್ತಾನ್ ಪರ ಘೋಷಣೆಗಳಿಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ)ವು ಸೋಮವಾರ ಆ ದೇಶದ ಉಪ ರಾಯಭಾರಿಯನ್ನು ಕರೆಸಿಕೊಂಡಿತ್ತು. ಇಂತಹ ಕೃತ್ಯಗಳ ಬಗ್ಗೆ ತೀವ್ರ ಕಳವಳಗಳನ್ನು ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದ ಸಚಿವಾಲಯವು ,ಪ್ರತ್ಯೇಕತಾವಾದ ಮತ್ತು ಉಗ್ರವಾದಕ್ಕೆ ಕೆನಡಾದಲ್ಲಿ ರಾಜಕೀಯ ಅವಕಾಶವನ್ನು ಎತ್ತಿ ತೋರಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.