HEALTH TIPS

ಪರಿಸರ ಸೂಕ್ಷ್ಮ ಪ್ರದೇಶ: ಗೊಂದಲ ನಿವಾರಣೆಯಾಗಿಲ್ಲ, ಕೇಂದ್ರಕ್ಕೆ ವರದಿ ಸಲ್ಲಿಸಲು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರ

               ಕೊಟ್ಟಾಯಂ: ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ವಿಧಾನಗಳ ಬಗ್ಗೆ ರಾಜ್ಯ ಸರ್ಕಾರದ ಗೊಂದಲ ದೂರವಾಗುತ್ತಿಲ್ಲ. ಈ ಹಿಂದೆ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಗಳು ನೀಡಿದ ಮಾಹಿತಿಯನ್ನು ಸೇರಿಸಿ ರಾಜ್ಯ ಪರಿಸರ ಇಲಾಖೆ ಕರಡು ವರದಿ ಸಿದ್ಧಪಡಿಸಿದೆ.

              ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಗಡಿಗೆ ಹೊಂದಿಕೊಂಡಿರುವ ಭೂದಾಖಲೆ ಮತ್ತಿತರ ದಾಖಲೆಗಳ ಮರು ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕರಡು ವರದಿ ಕುರಿತು ಕೂಡಲೇ ಅಭಿಪ್ರಾಯ ತಿಳಿಸುವಂತೆ ಸಂಬಂಧಪಟ್ಟ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.

             ಇದೇ ವೇಳೆ, ಪರಿಸರ ಸೂಕ್ಷ್ಮ ವಲಯ (ಇಎಸ್‍ಐ) ವಿಷಯದ ಕುರಿತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ವರದಿ ಸಲ್ಲಿಸಲು ಕೇರಳ ಮತ್ತೆ ವಿಸ್ತರಣೆಯನ್ನು ಕೋರಿತು. ಜನವರಿ 30ಕ್ಕೆ ನೀಡಬೇಕಿದ್ದ ವರದಿ ಮತ್ತೆ ವಿಳಂಬವಾಗಿದೆ. 2018ರಲ್ಲಿ ಕೇರಳವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ 92 ಗ್ರಾಮಗಳ ಗಡಿ ಗುರುತಿಸುವಲ್ಲಿ ಸಮಸ್ಯೆಗಳಿವೆ ಎಂದು ಅಂದಾಜಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries