HEALTH TIPS

ಕೋಝಿಕ್ಕೋಡ್ ನಲ್ಲಿ ಮತದಾನದ ಅವ್ಯವಹಾರ: ನಾಲ್ವರು ಅಧಿಕಾರಿಗಳ ಅಮಾನತು

                ಕೋಝಿಕ್ಕೋಡ್: ಮನೆಮನೆಯಲ್ಲಿ ಮತದಾನದ ವೇಳೆ ಮತ ಬದಲಿಸಿದ ಘಟನೆಯಲ್ಲಿ ನಾಲ್ವರು ಅಧಿಕಾರಿಗಳ ಅಮಾನತು ಮಾಡಲಾಗಿದೆ. ಕೋಝಿಕ್ಕೋಡ್ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಕುಮಾರ್ ಸಿಂಗ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೋಝಿಕ್ಕೋಡ್ ಪೆರುವಯಲ್‍ನಲ್ಲಿ ಸೋಗಿನ ಮತದಾನ ನಡೆದಿತ್ತು. 

              ಈ ಕ್ರಮವು ಪ್ರಜಾಪ್ರತಿನಿಧಿ ಕಾಯ್ದೆಯ (ಆರ್‍ಪಿ ಆಕ್ಟ್) ಸೆಕ್ಷನ್ 134 ರ ಅಡಿಯಲ್ಲಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ನಗರ ಪೋಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಮನೆಯಲ್ಲಿ ಮತದಾನ ಕರ್ತವ್ಯ ನಿರ್ವಹಿಸುತ್ತಿದ್ದ ವಿಶೇಷ ಮತಗಟ್ಟೆ ಅಧಿಕಾರಿ, ಮತಗಟ್ಟೆ ಅಧಿಕಾರಿ, ಮೈಕ್ರೋ ಅಬ್ಸರ್ವರ್ ಹಾಗೂ ಬೂತ್ ಮಟ್ಟದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

           ಪೆರುವಯಲ್‍ನ ಎಂಭತ್ನಾಲ್ಕನೇ ಬೂತ್‍ನ ಮತದಾರರಾದ 91 ವರ್ಷದ ಜಾನಕಿಯಮ್ಮ ಅವರ ಮತವನ್ನು ಇನ್ನೊಬ್ಬ ಮತದಾರರಾದ 80 ವರ್ಷದ ಜಾನಕಿಯಮ್ಮ ಅವರು ಚಲಾಯಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries