ಬದಿಯಡ್ಕ: ಮಾನ್ಯ ಶ್ರೀ ಚೌಡೇಶ್ವರಿ ಕ್ಷೇತ್ರವು ಪ್ರತಿಷ್ಠೆಗೊಂಡು ಇದೀಗ ಎರಡನೇ ವರ್ಷಕ್ಕೆ ಕಾಲಿಡುವ ಸಂದಭರ್Àದಲ್ಲಿ ಭಗವದ್ಭಕ್ತರ ಅಪೇಕ್ಷೆಯಂತೆ ಶ್ರೀದೇವಿಗೆ ಕಂಚಿನ ಪ್ರಭಾವಳಿಯನ್ನು ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ತಗಲುವ ಖರ್ಚು ರೂಪಾಯಿ ಒಂದು ಲಕ್ಷವನ್ನು ಭರಿಸಲು ಕೆಲವು ಭಕ್ತರು ಸೇವಾ ರೂಪದಲ್ಲಿ ನೀಡಲು ಮುಂದೆ ಬಂದಿದ್ದರೂ, ಶ್ರೀದೇವಿಗೆ ಸಮರ್ಪಿಸಲಿರುವ ಪ್ರಭಾವಳಿಯಾಗಿರುವುದರಿಂದ ಪ್ರತಿಯೊಬ್ಬ ಭಕ್ತನ ಕಾಣಿಕೆಯಿಂದ ಮಾಡುವುದು ಸೂಕ್ತವೆಂಬ ಹಿನ್ನೆಲೆಯಲ್ಲಿ ದಾನಿಗಳನ್ನು ಸಂತೈಸಿ ತಂತ್ರಿಗಳ ನಿರ್ದೇಶನದಲ್ಲಿ ಈ ಪುಣ್ಯ ಕಾರ್ಯವನ್ನು ಕೈಗೊಳ್ಳಲಾಗುವುದು. ಇದರಂಗವಾಗಿ ಇಂದು(ಏಪ್ರಿಲ್ 12) ಬೆಳಗ್ಗೆ 7.30ಕ್ಕೆ ಪ್ರಭಾವಳಿಗೆ ನಿಧಿ ಸಂಗ್ರಹ ಶ್ರೀಕ್ಷೇತ್ರದಲ್ಲಿ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

