HEALTH TIPS

ಲೋಕಸಮರ: ಪ್ರಬಲ ಪೈಪೋಟಿಯಲ್ಲಿ ಕೊಲ್ಲಂ ಕ್ಷೇತ್ರ

                  ಕೊಲ್ಲಂ: ನಟ ಕೃಷ್ಣಕುಮಾರ್ ಅವರನ್ನು ಪ್ರಬಲ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿದ ಬಳಿಕ ಕೊಲ್ಲಂನಲ್ಲಿ ತ್ರಿಕೋನ ಸಮರ ಕಳೆಯೇರಿದೆ. 

             ಶಾಸಕ ಹಾಗೂ ನಟ ಎಂ. ಮುಖೇಶ್ ಎಲ್ ಡಿಎಫ್ ಅಭ್ಯರ್ಥಿ. ಹಾಲಿ ಸಂಸದ ಆರ್‍ಎಸ್‍ಪಿಯ ಎನ್.ಕೆ. ಪ್ರೇಮಚಂದ್ರನ್ ಯುಡಿಎಫ್ ಅಭ್ಯರ್ಥಿ.

                ಬಿಜೆಪಿ ತನ್ನ ಮತಗಳಿಕೆಯನ್ನು ಹಂತಹಂತವಾಗಿ ಹೆಚ್ಚಿಸಿಕೊಂಡ ಇತಿಹಾಸ ಹೊಂದಿದೆ. ಕೊಲ್ಲಂ ನಗರದ ಎಲ್ಲಾ ನಿರ್ಣಾಯಕ ಕಾರ್ಪೋರೇಷನ್ ವಿಭಾಗಗಳಲ್ಲಿ ಬಿಜೆಪಿ ಹೆಚ್ಚಿನ ಪ್ರಭಾವವನ್ನು ಹೊಂದಿದೆ. ಚಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಿಂದ ಪಕ್ಷ ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹ ಮತಗಳನ್ನು ಹೊಂದಿದೆ. ಹೀಗಾಗಿ ಪಕ್ಷ ಈ ಬಾರಿ ಭರ್ಜರಿ ಜಯ ಸಾಧಿಸುವ ಗುರಿ ಹೊಂದಿದೆ.

             2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಭಾಗವಾಗಿ ಕೊಲ್ಲಂ ಕ್ಷೇತ್ರವನ್ನು ರಚಿಸಲಾಯಿತು. ಚವರ, ಪುನಲೂರು, ಚಡಯಮಂಗಲಂ, ಕುಂದರ, ಕೊಲ್ಲಂ, ಇರವಿಪುರಂ ಮತ್ತು ಚತ್ತನ್ನೂರು ವಿಧಾನಸಭಾ ಕ್ಷೇತ್ರಗಳು ಕೊಲ್ಲಂ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಕುಂದರ ಹೊರತುಪಡಿಸಿ ಉಳಿದೆಲ್ಲೆಡೆ ಎಲ್‍ಡಿಎಫ್ ನ ಶಾಸಕರಿರುವರು . ಕ್ಷೇತ್ರ ಮರುವಿಂಗಡಣೆಗೂ ಮುನ್ನ ಕುನ್ನತ್ತೂರು, ಕರುನಾಗಪಳ್ಳಿ, ಚವರ, ಪುನಲೂರು, ಚಡಯಮಂಗಲಂ, ಕುಂದರ, ಕೊಲ್ಲಂ, ಇರವಿಪುರಂ ಮತ್ತು ಚತ್ತನ್ನೂರು ಕ್ಷೇತ್ರಗಳನ್ನು ಒಳಗೊಂಡಿತ್ತು.

           1957ರಲ್ಲಿ ಎಡಪಕ್ಷಗಳು ಈ ಕ್ಷೇತ್ರವನ್ನು ಗೆದ್ದವು. 1962ರಿಂದ 1977ರವರೆಗೆ ನಡೆದ ನಾಲ್ಕೂ ಚುನಾವಣೆಗಳಲ್ಲಿ ಆರ್‍ಎಸ್‍ಪಿಯ ಎನ್. ಶ್ರೀಕಂಠನ್ ನಾಯರ್ ಜಯಗಳಿಸಿದ್ದರು.  1980ರಲ್ಲಿ ಕಾಂಗ್ರೆಸ್ ನ ಬಿ.ಕೆ. ನಾಯರ್ ಗೆದ್ದರು. 84ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್. ಕೃಷ್ಣಕುಮಾರ್ ಗೆದ್ದಿದ್ದಾರೆ. ಕೃಷ್ಣಕುಮಾರ್ 89 ಮತ್ತು 91ರಲ್ಲಿ ಗೆಲುವನ್ನು ಪುನರಾವರ್ತಿಸಿದರು.

            1996ರಲ್ಲಿ ಆರ್‍ಎಸ್‍ಪಿಯ ಎನ್.ಕೆ. ಪ್ರೇಮಚಂದ್ರನ್ ವಿಜಯಗಳಿಸಿದ್ದರು. 98ರಲ್ಲಿ ಪ್ರೇಮಚಂದ್ರನ್ ಮತ್ತೆ ಗೆದ್ದಿದ್ದರು. 1999ರಲ್ಲಿ ಸಿಪಿಎಂ ಆರ್‍ಎಸ್‍ಪಿಯಿಂದ ಮತ್ತೆ ಸ್ಥಾನ ಗಳಿಸಿತು. ರಾಜೇಂದ್ರನ್ ಅವರನ್ನು ನಿಲ್ಲಿಸಿ ಗೆಲ್ಲಿಸಲಾಯಿತು. 2004ರಲ್ಲಿ ಸ್ವತಃ ರಾಜೇಂದ್ರನ್ ಸಂಸದರಾದರು. ಆದರೆ 2009ರಲ್ಲಿ ಕಾಂಗ್ರೆಸ್‍ನ ಎನ್. ಪೀತಾಂಬರ ಕುರುಪ್ ಮೂಲಕ ಯುಡಿಎಫ್ ಕ್ಷೇತ್ರವನ್ನು ಮತ್ತೆ ವಶಪಡಿಸಿಕೊಂಡಿತು. 2014ರಲ್ಲಿ ಯುಡಿಎಫ್ ಸೇರಿದ್ದ ಎನ್.ಕೆ.ಪ್ರೇಮಚಂದ್ರನ್ ಮತ್ತೊಮ್ಮೆ ಗೆದ್ದರು. ಪ್ರೇಮಚಂದ್ರನ್ 2019 ರಲ್ಲೂ ತಮ್ಮ ಗೆಲುವನ್ನು ಪುನರಾವರ್ತಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries