ನವದೆಹಲಿ: ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರು ಭಾರತದ ಮೊದಲ ಪ್ರಧಾನಿ 'ನೇತಾಜಿ ಸುಭಾಷ್ ಚಂದ್ರ ಬೋಸ್' ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
0
samarasasudhi
ಏಪ್ರಿಲ್ 06, 2024
ನವದೆಹಲಿ: ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರು ಭಾರತದ ಮೊದಲ ಪ್ರಧಾನಿ 'ನೇತಾಜಿ ಸುಭಾಷ್ ಚಂದ್ರ ಬೋಸ್' ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.
ಮಾರ್ಚ್ 27ರಂದು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಂಗನಾ ಭಾಗವಹಿಸಿದ್ದರು.
'ನನ್ನ ಪ್ರಕಾರ, ಸುಭಾಷ್ ಚಂದ್ರ ಬೋಸ್ ಅವರು ದೇಶದ ಮೊದಲ ಪ್ರಧಾನಿ ಎಂದ ಕಂಗನಾ ಹೇಳಿದರು. ಕೂಡಲೇ ನಿರೂಪಕಿ, ಬೋಸ್ ಅವರು ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ನೆನಪಿಸಿದರು. ತಕ್ಷಣ ಎಚ್ಚೆತ್ತ ಕಂಗನಾ, ಬೋಸ್ ಅವರು ಪ್ರಧಾನಿ ಆಗಿರಲಿಲ್ಲ ಹೌದು, ಆದರೆ ಏಕೆ? ಅವರು ಎಲ್ಲಿಗೆ ಹೋದರು? ಅವರು ಹೇಗೆ ಕಣ್ಮರೆಯಾದರು' ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ವಿವಿಧಿ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
'ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರ ಪ್ರಕಾರ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಮೊದಲ ಪ್ರಧಾನಿಯಂತೆ' ಎಂದು ರೋಶನ್ ರಾಯ್ ಎಂಬುವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ '2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು' ಎಂದು ಕಂಗನಾ ಹೇಳಿದ್ದರು.