ಮುಂಬೈ: ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ವಿವರಗಳನ್ನು ಒದಗಿಸುವಂತೆ ಚುನಾವಣಾ ಆಯೋಗ ತಿಳಿಸಿದೆ.
0
samarasasudhi
ಏಪ್ರಿಲ್ 17, 2024
ಮುಂಬೈ: ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ವಿವರಗಳನ್ನು ಒದಗಿಸುವಂತೆ ಚುನಾವಣಾ ಆಯೋಗ ತಿಳಿಸಿದೆ.
'ಏಪ್ರಿಲ್ 12ರಂದು ಕಳುಹಿಸಿದ ಪತ್ರದಲ್ಲಿ ವಿಮಾನ ಮತ್ತು ಹೆಲಿಕಾಫ್ಟರ್ ವಿವರಗಳನ್ನು ಪ್ರಯಾಣಿಸುವ ಮೂರು ದಿನಗಳ ಮೊದಲು ಜಿಲ್ಲಾ ಚುನಾವಣಾ ಕಚೇರಿಗೆ ಒದಗಿಸಬೇಕು ಎಂದು ತಿಳಿಸಲಾಗಿತ್ತು.
'ಆಯೋಗಕ್ಕೆ ಒದಗಿಸುವ ಮಾಹಿತಿಯಲ್ಲಿ ಹೆಲಿಕಾಫ್ಟರ್ ಅಥವಾ ವಿಮಾನ ಕಂಪನಿಯ ವಿವರ, ಪ್ರಯಾಣ ಪ್ರಾರಂಭವಾಗುವ ಮತ್ತು ತಲುಪುವ ಸ್ಥಳ, ಅದರಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಇರಬೇಕಿದೆ' ಎಂದರು.
ಲೋಕಸಭೆ ಚುನಾವಣೆಗೆ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಈ ಮಾಹಿತಿಯನ್ನು ಒದಗಿಸಬೇಕು. ತಪ್ಪದೇ ಅದನ್ನು ಆಯೋಗಕ್ಕೆ ಕಳುಹಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.