ಕೊಚ್ಚಿ: ಬಹಳ ಮುದ್ದಿನಿಂದ ಸಾಕಿ ಸಲುಹಿದ್ದ ಮಗಳು ಅಪಘಾತದಲ್ಲಿ ದುರಂತ ಸಾವಿಗೀಡಾದ ಸುದ್ದಿಯನ್ನು ಕೇಳಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೊತ್ತಮಂಗಲಂನಲ್ಲಿ ನಡೆದಿದೆ.
0
samarasasudhi
ಏಪ್ರಿಲ್ 18, 2024
ಕೊಚ್ಚಿ: ಬಹಳ ಮುದ್ದಿನಿಂದ ಸಾಕಿ ಸಲುಹಿದ್ದ ಮಗಳು ಅಪಘಾತದಲ್ಲಿ ದುರಂತ ಸಾವಿಗೀಡಾದ ಸುದ್ದಿಯನ್ನು ಕೇಳಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಕೊತ್ತಮಂಗಲಂನಲ್ಲಿ ನಡೆದಿದೆ.
ಗಾಯತ್ರಿ (45) ಮೃತ ತಾಯಿ. ಈಕೆ ಕೊತ್ತಮಂಗಲಂ ನಿವಾಸಿ.
ಕಳೆದ ಎರಡು ತಿಂಗಳಿಂದ ಸ್ನೇಹಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕಳೆದ ಶನಿವಾರ ಸ್ನೇಹಾ ಕೊನೆಯುಸಿರೆಳೆದಳು. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಗಾಯತ್ರಿ ನೆಲ್ಲಿಕುಝಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಗಾಯತ್ರಿ ಪತಿ ಹನುಮಂತ್ ನಾಯಕ್ ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ. ಕಳೆದ 30 ವರ್ಷಗಳಿಂದ ಕೊತ್ತಮಂಗಲಂ ಜ್ಯುವೆಲ್ಲರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ತಾಯಿ-ಮಗಳ ಶವಗಳನ್ನು ಮಹಾರಾಷ್ಟ್ರಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.