HEALTH TIPS

ನಾಗರಕಟ್ಟೆಯ ಶ್ರೀ ಕೊರತಿಯಮ್ಮ ಗುಳಿಗಜ್ಜ ದೈವಸ್ಥಾನದ ದಶಮಾನೋತ್ಸವ, ಗೌರವಾರ್ಪಣೆ

                     

          ಕಾಸರಗೋಡು : ನಗರದ ನಾಗರಕಟ್ಟೆಯ ಶ್ರೀ ಕೊರತಿಯಮ್ಮ ಗುಳಿಗಜ್ಜ ದೈವಸ್ಥಾನದ ದಶಮಾನೋತ್ಸವ ಅಂಗವಾಗಿ ನಾಗರಕಟ್ಟೆಯ ಭಿಕ್ಷು ಸಭಾಂಗಣದಲ್ಲಿ  ಧಾರ್ಮಿಕ ಸಭೆ. ನಡೆಯಿತು. ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನ ಪುರೋಹಿತ ಗಣಪತಿ ಭಟ್ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. 

           ಕಾಸರಗೋಡು ಕನ್ನಡ ಭವನ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್ ಅದ್ಯಕ್ಷತೆ ವಹಿಸಿ ಮಾತನಾಡಿ,  ಧಾರ್ಮಿಕ ಕೇಂದ್ರಗಳು ವೈದಿಕ, ತಾಂತ್ರಿಕ, ಹಾಗೂ ಪಾರಂಪರಿಕ ಆಚರಣೆಗಳ ಜತೆಗೆ ಸಾಹಿತ್ಯಿಕ ಸಾಂಸ್ಕøತಿಕ ಧಾರ್ಮಿಕ ಕಾರ್ಯಕ್ರಮ ಗಳನ್ನು ಅಳವಡಿಸಿ ಎಲ್ಲರನ್ನು ಸಂಘಟಿಸಿ ಇಂತಹ ಸಭೆ ಸಮಾರಂಭ ಗಳನ್ನು ಆಯೋಜಿಸುವಾಗ ನಿಜವಾದ ದೈವಕಾರ್ಯ ಸಫಲವಾಗುವುದು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಲಾಪ್ರತಿಭೆಗಳನ್ನು ಅಭಿನಂದಿಸಿ ಗೌರವಿಸಿದಾಗ ಮಕ್ಕಳ ಮುಖದಲ್ಲಿ ಬೀರಿದ ಆತ್ಮವಿಶ್ವಾಸದಿಂದ ದೇವರೂ ಸಂಪ್ರೀತನಾಗುತ್ತಾನೆ ಎಂದು ತಿಳಿಸಿದರು. ನಗರಸಭಾ ಸದಸ್ಯೆ ರಂಜಿತಾ ಮೋಹನದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ದೈವಸ್ಥಾನ ಸಮಿತಿ ಅಧ್ಯಕ್ಷ ಕೆ. ನಿರಂಜನ, ಸಲಹೆಗಾರರಾದ ಜಯಪ್ರಕಾಶ್‍ನಾರಾಯಣ್ ಕೆ.ಎಸ್, ಕೆ.ಎನ್ ಯದುಕುಲೇಶ್, ಶ್ಯಾಮ, ಕೋಶಾಧಿಕಾರಿ ಕೆ.ಪಿ ಅನಿಲ್, ಗಣೇಶ್ ಕೆ. ಕೋಟೆಗುಡ್ಡೆ, ಉಮಾನಾಥ ಕೆ.ಎಸ್, ಚಂದ್ರಕಾಂತ, ವಿನೋದನ್, ಧಾರ್ಮಿಕ ಮುಂದಾಳು ವೇಲಾಯುಧನ್ ಉಪಸ್ಥಿತರಿದ್ದರು.  ಈ ಸಂದರ್ಭ  ವಾಮನ್ ರಾವ್ ಬೇಕಲ್,  ಪುರೋಹಿತ ಗಣಪತಿ ಭಟ್, ಭಾಸ್ಕರ ಹೊನ್ನೆಮೂಲೆ, ಚಿದಾನಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶ್ರೀಕೊರತಿಯಮ್ಮ ಗುಳಿಗಜ್ಜ ದೈವಸ್ಥಾನ ಸಮಿತಿ ಕಾರ್ಯದರ್ಶಿ ಕೆ.ಎನ್ ರಘುಕುಲೇಶ್ ಅವರಿಗೆ ಪೌರಸನ್ಮಾನ ನೀಡಲಾಯಿತು. ರಾಮ್‍ಮೋಹನ್ ನಾಗರಕಟ್ಟೆ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕಿ ರೇಖಾ ಜೆ.ರಾವ್ ಕಾರ್ಯಕ್ರಮ ನಿರೂಪಿಸಿದರು.  ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿಪಾಲ್ಗೊಂಡ ಪ್ರತಿಭೆಗಳನ್ನು ಗೌರವಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries