ಕೊಲಂಬೊ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರನ್ನು ಭೇಟಿ ಮಾಡಿದ ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಸಂತೋಷ್ ಝಾ ಅವರು, ರಾಮಾಯಣಕ್ಕೆ ಸಂಬಂಧಿಸಿ ಶ್ರೀಲಂಕಾದಲ್ಲಿರುವ ಕುರುಹುಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
0
samarasasudhi
ಏಪ್ರಿಲ್ 23, 2024
ಕೊಲಂಬೊ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರನ್ನು ಭೇಟಿ ಮಾಡಿದ ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನರ್ ಸಂತೋಷ್ ಝಾ ಅವರು, ರಾಮಾಯಣಕ್ಕೆ ಸಂಬಂಧಿಸಿ ಶ್ರೀಲಂಕಾದಲ್ಲಿರುವ ಕುರುಹುಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ರಾಮಜನ್ಮ ಭೂಮಿ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಮತ್ತು ಅವರ ತಂಡವನ್ನು ಸಂತೋಷ್ ಅವರು ಶ್ರೀಲಂಕಾದಲ್ಲಿನ ಇಂಡಿಯಾ ಹೌಸ್‌ನಲ್ಲಿ ಭಾನುವಾರ ಭೇಟಿ ಮಾಡಿದರು.
'ರಾಮಾಯಣ ಪುನರೋತ್ಥಾನ ಯೋಜನೆಯ ಕಾರ್ಯಕ್ರಮದಲ್ಲಿಯೂ ಸಂತೋಷ್ ಭಾಗಿಯಾಗಿದ್ದರು. ಈ ಯೋಜನೆಯಿಂದ ಶ್ರೀಲಂಕಾ ಮತ್ತು ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ' ಎಂದು ಶ್ರೀ ಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದೆ.