HEALTH TIPS

ಜಾಗತಿಕ ನಾಯಕತ್ವದ ಕುರಿತಾದ ವೈಯಕ್ತಿಕ ಸಂಶಯಗಳಿಂದ ಹೊರಬನ್ನಿ: ಅಮೆರಿಕಕ್ಕೆ ಕಿಷಿಡಾ

            ವಾಷಿಂಗ್ಟನ್: ಜಾಗತಿಕವಾಗಿ ಅಮೆರಿಕದ ನಾಯಕತ್ವವು ಹೆಚ್ಚು ಅಗತ್ಯವಿರುವ ಈ ಸಮಯದಲ್ಲಿ ಅಮೆರಿಕದ ಸಂಸದರು ವೈಯಕ್ತಿಕ ಸಂಶಯಗಳಿಂದ ಬಳಲುತ್ತಿದ್ದಾರೆ ಎಂದು ಅಮೆರಿಕಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಷಿಡಾ ಅವರು ಕಾಂಗ್ರೆಸ್‌ನ ಜಂಟಿ ಸಭೆಯನ್ನುದ್ದೇಶಿಸಿ ಹೇಳಿದ್ದಾರೆ.

           'ಈಗತಾನೆ ನಮ್ಮ ಭೇಟಿಯ ಸಂದರ್ಭದಲ್ಲಿ ಜಾಗತಿಕವಾಗಿ ತಮ್ಮ ಪಾತ್ರ ಏನೆಂಬುದರ ಬಗ್ಗೆ ಕೆಲವು ಅಮೆರಿಕನ್ನರಲ್ಲಿ ವೈಯಕ್ತಿಕ ಸಂಶಯ ಇರುವುದನ್ನು ಪತ್ತೆ ಮಾಡಿದ್ದೇನೆ'ಎಂದು ಅವರು ಹೇಳಿದ್ದಾರೆ.


              ತೈವಾನ್ ಬಗ್ಗೆ ಚೀನಾ ಆಕ್ರಮಣಕಾರಿ ವರ್ತನೆಯನ್ನು ತಡೆದು ಪೂರ್ವ ಏಷ್ಯಾದಲ್ಲಿ ಯುದ್ಧದ ವಾತಾವರಣವನ್ನು ತಡೆಯುವ ನಿಟ್ಟಿನಲ್ಲಿ ರಷ್ಯಾ ವಿರುದ್ಧ ಉಕ್ರೇನ್‌ನ ದೇಶ ರಕ್ಷಣೆಯ ಯುದ್ಧಕ್ಕೆ ಬೆಂಬಲಿಸುವುದಾಗಿ ಜಪಾನ್ ಹೇಳಿದೆ.

              ಚೀನಾದ ಪ್ರಸ್ತುತ ಬಾಹ್ಯ ನಿಲುವು ಮತ್ತು ಮಿಲಿಟರಿ ಕ್ರಮಗಳು ಜಪಾನ್‌ನ ಶಾಂತಿ ಮತ್ತು ಭದ್ರತೆಗೆ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಸಮುದಾಯದ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಸವಾಲನ್ನು ಒಡ್ಡಿದೆ ಎಂದೂ ಅವರು ಹೇಳಿದ್ದಾರೆ.

                ಚೀನಾವು ಸದ್ಯ ಜಾಗತಿಕವಾಗಿ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಕುರಿತಾದ ಉಭಯ ದೇಶಗಳ ಒಪ್ಪಂದದ ಕುರಿತಂತೆ ಕಿಷಿಡಾ ಮಾತನಾಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries