HEALTH TIPS

ಇಷ್ಟು ಕಡಿಮೆ ಸಂಬಳಕ್ಕಾಗಿ ಐಎಎಸ್ ಆಗಬೇಕೆ? ಚಾರ್ಟೆಡ್‌ ಅಕೌಂಟೆಂಟ್‌ ಪ್ರಶ್ನೆಗೆ ನೆಟ್ಟಿಗರ ಉತ್ತರ ಹೀಗಿತ್ತು

            ವದೆಹಲಿ: ಐಎಎಸ್ ಅಧಿಕಾರಿಯಾಗಬೇಕೆಂಬುದು ದೇಶದ ಅನೇಕ ಯುವಕರ ಕನಸಾಗಿದೆ. ಬಯಸಿದ ಗುರಿಯನ್ನು ಸಾಧಿಸಲು, ಕೆಲವರು ವರ್ಷಗಳ ಕಾಲ ಶ್ರಮಿಸುತ್ತಾರೆ ಮತ್ತು ತಮ್ಮ ಪ್ರೀತಿಯ ಕುಟುಂಬದಿಂದಲೂ ದೂರವಿರುತ್ತಾರೆ. ಐಎಎಸ್​-ಐಪಿಎಸ್​ ಸ್ಥಾನಕ್ಕೆ ಸಿಗುವ ಗೌರವಕ್ಕೆ ಬೆಲೆ ಕಟ್ಟಲಾಗದು.

              ಲಕ್ಷಗಟ್ಟಲೆ ಸಂಬಳ ಸಿಗುವ ಕಾರ್ಪೊರೇಟ್‌ ಉದ್ಯೋಗವನ್ನೇ ತೊರೆದು ಐಎಎಸ್‌ ಆಗುವವರನ್ನು ನೋಡಿದ್ದೇವೆ.


                  ಇತ್ತೀಚೆಗೆ ಬಿಡುಗಡೆಯಾದ ಯುಪಿಎಸ್​ಸಿ ಫಲಿತಾಂಶದಲ್ಲಿ ತೆಲಂಗಾಣ ಯುವಕ ಸಾಯಿ ಕಿರಣ್ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಐಎಎಸ್ ಸಾಧನೆ ಮಾಡಿರುವುದು ಬಹುತೇಕರಿಗೆ ಗೊತ್ತೇ ಇದೆ. ಆದರೆ, ಐಎಎಸ್ ಉದ್ಯೋಗಿಗಳ ಸಂಬಳದ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿರುವುದು ಇದೀಗ ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

                    ಸಂಬಳ ಕಡಿಮೆ ಎಂದು ಗೊತ್ತಿದ್ದರೂ ಯುವಕರು ಐಎಎಸ್ ಆಗಲು ಬಯಸುವುದೇಕೆ? ನನಗಂತೂ ಅರ್ಥವಾಗುತ್ತಿಲ್ಲ ಎಂದು ಮುಂಬೈನ ಚಿರಾಗ್ ಚೌಹಾಣ್ ಎಂಬುವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಸಿಎ ಮತ್ತು ಐಎಎಸ್ ಅಧಿಕಾರಿಗಳ ಸಂಬಳವನ್ನು ಹೋಲಿಸಿದ್ದಾರೆ. ಐಎಎಸ್ ಅಧಿಕಾರಿಗಳ ಸರಾಸರಿ ವೇತನವು ಸಿಎ ಉದ್ಯೋಗಿಗಳ ಆರಂಭಿಕ ವೇತನಕ್ಕೆ ಸಮಾನವಾಗಿದೆ ಎಂದು ಹೇಳಿದ್ದಾರೆ. ಆದರೂ ಜನರು ಐಎಎಸ್ ಆಗಲು ಏಕೆ ಬಯಸುತ್ತಾರೆ ಎಂಬ ಶೀರ್ಷಿಕೆ ನೀಡಿದ್ದಾರೆ. ಇಷ್ಟು ಕಡಿಮೆ ಸಂಬಳ ಪಡೆಯಲು ಐಎಎಸ್ ಆಗಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

                ಚಿರಾಗ್ ಚೌಹಾಣ್ ಹಾಕಿರುವ ಈ ಪೋಸ್ಟ್​ಗೆ ನೆಟಿಜನ್​ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಎಎಸ್ ಹಣಕ್ಕಾಗಿ ಅಲ್ಲ, ಆ ಸ್ಥಾನದ ಗೌರವ ಮತ್ತು ಅಧಿಕಾರಕ್ಕಾಗಿ ಮತ್ತು ಜನರ ಸೇವೆ ಮಾಡುವ ಮಹತ್ವಾಕಾಂಕ್ಷೆಗಾಗಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ ಸಿವಿಲ್‌ನಲ್ಲಿ ಅರ್ಹತೆ ಪಡೆಯುವವರ ಸಂಖ್ಯೆ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗಿಂತ ಕಡಿಮೆಯಿದೆ, ಆ ವೃತ್ತಿಯಲ್ಲಿ ಆಸಕ್ತಿ ಇರುವವರು ಮುಂದುವರಿಯಲು ಬಯಸುತ್ತಾರೆ, ಅದಕ್ಕೂ ಸಂಬಳಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮತ್ತೊಬ್ಬ ನೆಟ್ಟಿಗ ಪ್ರತಿವಾದ ಮಾಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries