HEALTH TIPS

ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ದಾಖಲೆಯ ಪ್ರವಾಸಿಗರ ಭೇಟಿ

             ಗುವಾಹಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶಕ್ಕೆ ಈ ವರ್ಷ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

            ಈ ವರ್ಷ 3,27,493 ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. ಅವರಲ್ಲಿ 3,13,574 ಜನ ಭಾರತೀಯರು ಮತ್ತು 13,919 ಜನ ವಿದೇಶಿಗರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

              2023ರ ಅಕ್ಟೋಬರ್ ಮಧ್ಯದಲ್ಲಿ ಉದ್ಯಾನವಕ್ಕೆ ಪ್ರವಾಸಿಗರ ಭೇಟಿಯನ್ನು ಅನುಮತಿಸಲಾಗಿತ್ತು. ಈ ಅವಧಿಯಲ್ಲಿ ಡಾಲ್ಫಿನ್‌ಗಳ ವೀಕ್ಷಣೆಗೆ ಬೋಟ್‌ ಸಫಾರಿ, ಜಂಗಲ್ ಸಫಾರಿ ಮತ್ತು ಆನೆ ಸಫಾರಿ, ಸೈಕ್ಲಿಂಗ್ ಟ್ರಯಲ್‌ ಮತ್ತು ಚಾರಣದಂತಹ ಆಯ್ಕೆಗಳನ್ನು ಪ್ರವಾಸಿಗರಿಗೆ ನೀಡಲಾಗಿತ್ತು.

                ಸುಂದರ ಭೂದೃಶ್ಯಗಳು, ಶ್ರೀಮಂತ ಜೀವವೈವಿಧ್ಯತೆ ಮತ್ತು ಒಂದು ಕೊಂಬಿನ ಘೇಂಡಾಮೃಗದಂತಹ ಅಪರೂಪದ ಪ್ರಾಣಿಗಳಿಗೆ ಕಾಜಿರಂಗ ನೆಲೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries