ಕಾಸರಗೋಡು: ಆರ್ಥಿಕ ವ್ಯವಸ್ಥೆಯ ಅಂಕಿಅಂಶ ಇಲಾಖೆಯು ಕಾಸರಗೋಡು ಜಿಲ್ಲಾ ಅಂಕಿ ಅಂಶ ಕಛೇರಿ ಹಾಗೂ ಜಿಲ್ಲೆಯ ಎರಡು ತಾಲೂಕು ಅಂಕಿಅಂಶ ಇಲಾಖೆಯ ಕಛೇರಿಗಳಲ್ಲಿ ಕಂಪ್ಯೂಟರ್, ಪ್ರಿಂಟರ್ ಮತ್ತು ಸಂಬಂಧಿತ ಉಪಕರಣಗಳನ್ನು ನಿರ್ವಹಿಸಲು ಒಂದು ವರ್ಷದ ನಿರ್ವಹಣೆ ಗುತ್ತಿಗೆ ಆಧಾರದ ಮೇಲೆ ಆಸಕ್ತ ವ್ಯಕ್ತಿಗಳಿಂದ ಅಥವಾ ಸಂಸ್ಥೆಗಳಿಂದ ಕೋಟೇಶನ್ ಳನ್ನು ಆಹ್ವಾನಿಸಿದೆ. ಎಪ್ರಿಲ್ 24 ರಂದು ಬೆಳಗ್ಗೆ 11ರ ವರೆಗೆ ಕೊಟೇಶನ್ ಸ್ವೀಕರಿಸಲಾಗುವುದು. ಅದೇ ದಿನ ಬೆಳಗ್ಗೆ 11.30 ಕ್ಕೆ ಕೊಟೇಶನ್ ತೆರೆಯಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 293430, 9495478487)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

