HEALTH TIPS

ಪ್ರಕೃತಿ ವಿಕೋಪದ ವೇಳೆ ಮನೆ ಕಳಕೊಂಡ ಸಂತ್ರಸ್ಥೆಗೆ ಬಡ್ಡಿ ಸಹಿತ ಪರಿಹಾರ ನೀಡಲು ಮಾನವ ಹಕ್ಕು ಆಯೋಗದ ಆದೇಶ

                 ತಿರುವನಂತಪುರಂ: ಪ್ರವಾಹದಲ್ಲಿ ಹಾನಿಗೀಡಾದ ಮನೆಗೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ಬಡ್ಡಿ ಸೇರಿದಂತೆ ಪರಿಹಾರ ನೀಡುವಂತೆ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.

           ಆದೇಶದ ಪ್ರಕಾರ, ಪರಿಹಾರವನ್ನು ವರ್ಗಾಯಿಸಲು ಐದು ವರ್ಷ ವಿಳಂಬವಾಗಿದ್ದರಿಂದ  2018 ರಿಂದ 2023 ರವರೆಗಿನ ಬ್ಯಾಂಕ್ ಬಡ್ಡಿಯನ್ನು ಪಾವತಿಸಬೇಕು. ನೇಮಂ ಸಂತಿವಿಲಾದಲ್ಲಿ ವಾಸವಾಗಿರುವ ಕೆ.ಜಿ. ಕೃಷ್ಣವೇಣಿ ನೀಡಿದ ದೂರಿನ ಮೇರೆಗೆ ಕ್ರಮ ಜರುಗಿಸಲಾಗಿದೆ. ಜುಲೈ 2018. 5ರಂದು ಪ್ರಕೃತಿ ವಿಕೋಪದಲ್ಲಿ ದೂರುದಾರರ ಮನೆ ಕುಸಿದು ಬಿದ್ದಿತ್ತು. ಮನೆ ವಾಸಕ್ಕೆ ಯೋಗ್ಯವಲ್ಲದ ಕಾರಣ ಕೃಷ್ಣವೇಣಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡರು. ಕಂದಾಯ ಇಲಾಖೆಯ ಪರಿಶೀಲನೆ ನಂತರ 47,500 ಪಾವತಿಸಲು ನಿರ್ಧರಿಸಲಾಯಿತು, ಆದರೆ ಮುಂದಿನ ಕ್ರಮ ಕೈಗೊಂಡಿರಲಿಲ್ಲ. ಇದರೊಂದಿಗೆ ದೂರುದಾರರು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು.

           ಬಳಿಕ ಆಯೋಗವು ತಿರುವನಂತಪುರ ತಹಸೀಲ್ದಾರ್‍ಗೆ ಸಮನ್ಸ್ ಕಳುಹಿಸಿತು. ಸಮನ್ಸ್ ಸ್ವೀಕರಿಸಿದ ಜಿಲ್ಲಾಡಳಿತ ವಿಳಂಬಗೊಳಿಸಿತು. ದೂರುದಾರರ ಖಾತೆಗೆ 47,500 ರೂ. ನೀಡಲು ಆಯೋಗದ ಕಾರ್ಯಾಧ್ಯಕ್ಷ ಹಾಗೂ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ ಈಗ ಸೂಚಿಸಿರುವರು. ದೂರುದಾರರಿಗೆ ಮತ್ತು ಅವರ ಅಂಗವಿಕಲ ಪುತ್ರನಿಗೆ ಸೀಮಿತ ಮೊತ್ತವನ್ನು ಪಾವತಿಸಲು 5 ವರ್ಷಗಳ ಕಾಲ ವಿಳಂಬವಾಗಿರುವುದು ವಿಷಾದನೀಯ. ಸಾಮಾನ್ಯ ಬಡ ಸ್ತ್ರೀ ತಾಲೂಕು ಕಛೇರಿಗಳು ಹಲವು ಬಾರಿ ಎಡತಾಕಿದರು. ದೂರುದಾರರ ಮಾನವ ಹಕ್ಕುಗಳನ್ನು ನಾಶಪಡಿಸಲಾಗಿದೆ ಎಂದೂ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. ಆಯೋಗವು ಭೂಕಂದಾಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮೊತ್ತ ಪಾವತಿಸಲು ಸೂಚನೆ ನೀಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries