ತಿರುವನಂತಪುರಂ: 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರದ ಪೂರಕ ಪಠ್ಯಪುಸ್ತಕಗಳನ್ನು ತರಲು ಕೇರಳ ಸರ್ಕಾರ ನಿರ್ಧರಿಸಿದೆ.
ಈ ಪುಸ್ತಕಗಳಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್.ಸಿ.ಇ.ಆರ್.ಟಿ) ಪ್ರಸ್ತುತ ಶೈಕ್ಷಣಿಕ ಅಧಿವೇಶನದಿಂದ ರಾಜಕೀಯ ವಿಜ್ಞಾನ ಪುಸ್ತಕಗಳಿಂದ ತೆಗೆದುಹಾಕಿರುವ ಭಾಗಗಳನ್ನು ಒಳಗೊಂಡಿರುತ್ತದೆ.
ಎನ್.ಸಿ.ಇ.ಆರ್.ಟಿ ತನ್ನ ವೆಬ್‍ಸೈಟ್‍ನ ಇತ್ತೀಚಿನ ಪ್ರಕಟಣೆಯಲ್ಲಿ, "ರಾಜಕೀಯದಲ್ಲಿನ ಹೊಸ ಬೆಳವಣಿಗೆಗಳಿಗೆ ಅನುಗುಣವಾಗಿ ವಿಷಯವನ್ನು ನವೀಕರಿಸಲಾಗಿದೆ. ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠದ ತೀರ್ಪಿನ ನಂತರ ನಡೆದ ಹೊಸ ಬದಲಾವಣೆಗಳು ಮತ್ತು ಅದನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ" ಎಂದಿದ್ದು ಅಯೋಧ್ಯೆ ವಿಷಯದ ಪಠ್ಯವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂದು ಹೇಳಿತ್ತು.
ಕೇರಳದ ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ, "ಬಾಬರಿ ಮಸೀದಿ ಧ್ವಂಸಕ್ಕೆ ಕಾರಣವಾದ ಪುಟ 148 ರಿಂದ 151 ರವರೆಗೆ ಉಲ್ಲೇಖಿಸಲಾದ ಘಟನೆಗಳನ್ನು ತೆಗೆದುಹಾಕಲಾಗುವುದು ಎಂದು ಎನ್‍ಸಿಇಆರ್‍ಟಿ ಸ್ಪಷ್ಟಪಡಿಸಿದೆ. ಈ ಮೂಲಕ ಎನ್‍ಸಿಇಆರ್‍ಟಿ ಸ್ವತಂತ್ರ ಭಾರತದ ಪ್ರಮುಖ ವಿವರಗಳನ್ನು ತೆಗೆದುಹಾಕಿದೆ" ಎಂದಿದ್ದು ಘಟನೆಗಳ ಪ್ರಭಾವವನ್ನು ಕಡಮೆ ಮಾಡುವ ಮತ್ತು ಪಠ್ಯ ಪುಸ್ತಕಗಳ ಮೂಲಕ ಆ ಸಮಸ್ಯೆಗಳನ್ನು ಬೆಳಕಿಗೆ ತರುವ ಗುಪ್ತ ಕಾರ್ಯಸೂಚಿಯನ್ನು ಪೂರೈಸಲಾಗಿದೆ ಎಂದಿರುವರು.
‘ಇತಿಹಾಸಕ್ಕೆ ಸಂಬಂಧಿಸಿದ ಸಂಗತಿಗಳನ್ನು ಕಲಿಯುವ ಅವಕಾಶದಿಂದ ಮಕ್ಕಳು ವಂಚಿತರಾಗುತ್ತಿರುವುದು ಬೇಸರದ ಸಂಗತಿ. ಕಳೆದ ಮೂರು ವರ್ಷಗಳಲ್ಲಿ ದೇಶದ ಶೈಕ್ಷಣಿಕ ಕೀರ್ತಿ ಉಳಿಸುವ ಉದ್ದೇಶದಿಂದ ಎನ್‍ಸಿಇಆರ್‍ಟಿ ವಿಮುಖವಾಗಿದೆ.ಇದೀಗ ಗುಪ್ತ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸುತ್ತಿದೆ. ಶೈಕ್ಷಣಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವಲ್ಲಿ ಎನ್‍ಸಿಇಆರ್‍ಟಿಯ ಅತ್ಯುತ್ತಮ ಗತಕಾಲವನ್ನು ಪರಿಗಣಿಸಿ ಈ ಬದಲಾವಣೆಯು ಆತಂಕಕಾರಿಯಾಗಿದೆ ಎಂದು ಶಿವನ್ ಕುಟ್ಟಿ ಕಳವಳ ವ್ಯಕ್ತಪಡಿಸಿರುವರು.





