HEALTH TIPS

ಅಂಚೆ ಮತಪತ್ರದ ಮೂಲಕ ಹಕ್ಕು ಚಲಾಯಿಸಲು ಅವಕಾಶ: ಸಂತಸ ವ್ಯಕ್ತಪಡಿಸಿದ ಸಿಬ್ಬಂದಿ


              ಕಾಸರಗೋಡು: ಕೇರಳದಲ್ಲಿ ಸರ್ಕಾರಿ ಕೆಲಸ ಹೊಂದಿದ್ದು, ಕರ್ನಾಟಕದಲ್ಲಿ ವಾಸ್ತವ್ಯವಿರುವ ಹಾಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ನಡೆಸುತ್ತಾ,  ಕೇರಳದಲ್ಲಿ ವಾಸ್ತವ್ಯ ಹೂಡಿರುವ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ ಅಂಚೆ ಮತಕ್ಕೆ ಅವಕಾಶ ಲಭ್ಯವಾಗಿರುವುದರಿಂದ ಈ ಸಿಬ್ಬಂದಿ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

              ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ ಅಂಚೆ ಮತದಾನದ ಬಗ್ಗೆ ಇದ್ದಂತಹ ಗೊಂದಲ ಇದೀಗ ನಿವಾರಣೆಯಾಗಿದ್ದು, ಈ ಸಿಬ್ಬಂದಿ ಅಂಚೆ ಮತದಾನದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರಾಳರಾಗಿದ್ದಾರೆ. 

              ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ಉದ್ಯೋಗಿಗಳಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಿಕೊಡುವಲ್ಲಿ ಅಧಿಕಾರಿ ಮಟ್ಟದಲ್ಲಿ ಸ್ಪಷ್ಟ ಮಾರ್ಗನಿರ್ದೇಶಗಳಿಲ್ಲದಿರುವುದು ಸಿಬ್ಬಂದಿಯಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು, ಯಾವುದೇ ಕಾರಣಕ್ಕೂ ಇದನ್ನು ಕಡೆಗಣಿಸಬಾರದು ಎಂಬುದು ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶವಾಗಿದ್ದರೂ, ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದವರೇ ಮತದಾನದ ಹಕ್ಕಿನಿಂದ ವಂಚಿತರಾಗಬೇಕಾಗಿ ಬಂದಿದ್ದು, ಕೆಲವು ಸಿಬ್ಬಂದಿ ನಡೆಸಿರುವ ತೆರೆಮರೆಯ ಪ್ರಯತ್ನದಿಂದ ಕೊನೆಗೂ ಅಂಚೆ ಮತದಾನದ ಅವಕಾಶ ಲಭ್ಯವಾಗಿದೆ.

               ಈ ಹಿಂದೆ ಕೇರಳ ಹಾಗೂ ಕರ್ನಾಟಕದಲ್ಲಿ ಚುನಾವಣಾ ದಿನಾಂಕ ವ್ಯತ್ಯಸ್ತ ದಿನದಂದು ಬರುತ್ತಿದ್ದರೆ, ಏ. 26ರ ಲೋಕಸಭಾ ಚುನಾವಣೆ ದಿನಾಂಕ ಎರಡೂ ರಾಜ್ಯಗಳಲ್ಲಿ(ಕರ್ನಾಟಕದ ಕೆಲವೊಂದು ಜಿಲ್ಲೆ ಹೊರತುಪಡಿಸಿ)ಒಂದೇ ದಿನ ನಡೆಯುತ್ತಿರುವುದು ಎರಡೂ ರಾಜ್ಯಗಳಲ್ಲಿ ವಾಸ್ತವ್ಯವಿದ್ದು, ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮಸ್ಯೆ ತಲೆದೋರಿತ್ತು. ಪೆರ್ಲ ಸನಿಹದ ಶೇಣಿಯ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಹಕ್ಕು ಚಲಾಯಿಸಲು ಶತಾಯಗತಾಯಪ್ರಯತ್ನ ನಡೆಸಿ, ಇದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಬಗ್ಗೆ ಸುದ್ದಿಮಾಧ್ಯಮಗಳ ಜತೆ ನಿರಂತರ ಸಂಪರ್ಕವಿರಿಸುವುದರ ಜತೆಗೆ ಅದಿಕಾರಿ ವರ್ಗದವರನ್ನೂ ಎಚ್ಚೆತ್ತುಕೊಳ್ಳುವಂತೆ ಮಾಡಿರುವ ಇಂತವರ ಶ್ರಮದಿಂದ ಇತರ ಸಿಬ್ಬಂದಿಗೂ ಪ್ರಯೋಜನವಾಗಿದೆ. ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ವಿ ವೋ ಇ ಡಿ (ವೋಟರ್ ಆನ್ ಎಲೆಕ್ಷನ್ ಡ್ಯೂಟಿ) ಯಡಿ ಮತದಾನದ ಅವಕಾಶ ಕಲ್ಪಿಸಲಾಗಿದೆ.

               ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ನಿವಾಸಿಗಳಿಗೆ ಅಂಚೆ ಮತಪತ್ರ ಒದಗಿಸಿಕೊಡುವ ಬಗ್ಗೆ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಮತದಾನದ ಹಕ್ಕು ಹೊಂದಿದ್ದು, ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಅಂಚೆ ಮತಪತ್ರ ಲಭ್ಯವಾಗಿಸಿಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸಬೇಕಾಗಿದ್ದರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಲ್ಲೂ ಈ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇರಳದ ಸಿಬ್ಬಂದಿಗೂ ಇದೇ  ಸಮಸ್ಯೆ ಎದುರಾಗಿತ್ತು. 

                 ಅಂಚೆ ಮತದಾನ ಪ್ರಕ್ರಿಯೆ ಏಪ್ರಿಲ್ 21ಕ್ಕೆ ಅರಂಭಗೊಂಡಿದ್ದು,  24ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೂ ನಡೆಯಲಿದೆ.

           ಮತದಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಉಭಯ ರಾಜ್ಯಗಳಲ್ಲಿ ನೆಲೆಸಿರುವ ಅಥವಾ ಕರ್ತವ್ಯದಲ್ಲಿರುವ ಹೆಸರಲ್ಲಿ ಹಕ್ಕು ನಿಷೇಧಿಸುವುದು ಅಕ್ಷಮ್ಯವಾಗಿರುತ್ತದೆ. ಅಂಚೆ ಮತದಾನ ವ್ಯವಸ್ಥೆ ಮರುಸ್ಥಾಪಿಸುವ ವಿಚಾರದಲ್ಲಿ ಅದಿಕಾರಿಮಟ್ಟದಲ್ಲಿ ಹೋರಾಟ ನಡೆಸುವಲ್ಲಿ ಚುನಾವಣಾ ಕರ್ತವ್ಯ ಹೊಂದಿರುವ ಕೆಲವು ಸಿಬ್ಬಂದಿ ಪರಿಶ್ರಮವೂ ಶ್ಲಾಘನೀಯ.  ಎರಡೂ ಜಿಲ್ಲೆಗಳ ಚುನಾವಣಾಧಿಕಾರಿಗಳು ನಡೆಸಿರುವ ಪರಿಶ್ರಮದಿಂದ ಗೊಂದಲ ನಿವಾರಣೆಯಾಗಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿಯಲ್ಲಿ ಸಂತೋಷಕ್ಕೂ ಕಾರಣವಾಗಿದೆ ಎಂಬುದಾಗಿ ಅಂಚೆಮತದಾನ ನಡೆಸಿರುವ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.



 


   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries